“ನಮ್ಮನ್ನು ಕೈ ಬಿಡಬೇಡಿ…”! ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಹಿಂದೆ ಬಿದ್ದ ಮಾಜಿ ಸಚಿವರು, ಶಾಸಕರು!
ಬೆಂಗಳೂರು: ನಿನ್ನೆಯಷ್ಟೇ ರಾಜ್ಯದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಘೋಷಿಸಿದ ಬೆನ್ನಲ್ಲೇ ಇಂದು ಯಡಿಯೂರಪ್ಪನವರ ನಿವಾಸ ರಾಜಕೀಯದ ಕೇಂದ್ರ ಬಿಂದುವಾಗಿದೆ.
ಸಚಿವ ಸ್ಥಾನಾಕಾಂಕ್ಷಿಗಳು ಇಂದು ಬೆಳಗ್ಗಿನಿಂದಲೇ ಯಡಿಯೂರಪ್ಪನವರನ್ನು ಭೇಟಿ ಮಾಡಿ, ನಮ್ಮನ್ನು ಕೈ ಬಿಡಬೇಡಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನೂ ಮಂತ್ರಿ ಮಂಡಲ ರಚನೆಯಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಾತ್ರವೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇನ್ನು ಒಂದು ವಾರ ಅಥವಾ ಅದಕ್ಕಿಂತ ಮೊದಲೇ ಸಚಿವ ಸಂಪುಟ ರಚನೆ ನಡೆಯಲಿದೆ. ಸಚಿವ ಸಂಪುಟದಲ್ಲಿ ಸ್ಥಾನ ದಕ್ಕಿಸಿಕೊಳ್ಳಲು ಈಗಲೇ ಲಾಬಿ ಆರಂಭವಾಗಿದೆ. ಹೀಗಾಗಿಯೇ ಮಾಜಿ ಸಚಿವರು ಹಾಗೂ ಶಾಸಕರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಂಗಿರುವ ಕಾವೇರಿ ನಿವಾಸದ ಸುತ್ತ ತಿರುಗುತ್ತಿರುವ ದೃಶ್ಯಗಳು ಕಂಡು ಬಂದಿದೆ.
ಪಕ್ಷದಲ್ಲಿ ಯಡಿಯೂರಪ್ಪ ಸುಪ್ರೀಂ ಆಗಿದ್ದಾರೆ ಎಂದು ಭಾವಿಸಿರುವ ಬಿಜೆಪಿ ಶಾಸಕರು ಹಾಗೂ ಸಚಿವರು, ಸಚಿವ ಸ್ಥಾನಕ್ಕಾಗಿ ಬಸವರಾಜ್ ಬೊಮ್ಮಾಯಿ ಅವರನ್ನು ಬಿಟ್ಟು, ಯಡಿಯೂರಪ್ಪನವರ ಹಿಂದೆ ಸುತ್ತುತ್ತಿದ್ದಾರೆ ಎಂದು ಹೇಳಲಾಗಿದೆ. ಇಂದು ಬೆಳಗ್ಗೆಯಿಂದ ಕುಮಟಾ ಶಾಸಕ ದಿನಕರ್ ಶೆಟ್ಟಿ, ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ, ವಿರೂಪಾಕ್ಷಪ್ಪ ಬಳ್ಳಾರಿ, ತಿಪ್ಪಾರೆಡ್ಡಿ ಮಾತ್ರವಲ್ಲ, ಆರ್.ಅಶೋಕ್, ಬೈರತ್ತಿ ಬಸವರಾಜ್, ಪ್ರಭು ಚೌಹಾಣ್, ಗೋವಿಂದ ಕಾರಜೋಳ, ಡಾ.ಕೆ. ಸುಧಾಕರ್, ಭೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್ ಸೇರಿದಂತೆ ಹಲವು ಸಚಿವರು, ಶಾಸಕರು ಯಡಿಯೂರಪ್ಪನವರ ಮನ ಗೆಲ್ಲುವ ಪ್ರಯತ್ನವನ್ನು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನಷ್ಟು ಸುದ್ದಿಗಳು…
ಯಡಿಯೂರಪ್ಪಗೆ ವಯಸ್ಸಾಗಿಲ್ಲ, ಮದುವೆ ಮಾಡಿಸಿದ್ರೆ ಮಕ್ಕಳಾಗ್ತವೆ | ಸಿ.ಎಂ.ಇಬ್ರಾಹಿಂ
ನಿದ್ದೆಯಿಂದ ಎಚ್ಚೆತ್ತು ನದಿಯ ಬದಿಗೆ ಹೋದ ಮಗುವಿನ ದುರಂತ ಸಾವು
ಯಡಿಯೂರಪ್ಪ ಮೇಲೆ ಮೃಧು ಧೋರಣೆ, ಕಾಂಗ್ರೆಸ್ ತೋರುತ್ತಿರುವ ನಾಟಕ | ಹೆಚ್.ಡಿ.ಕುಮಾರಸ್ವಾಮಿ
ಅಶ್ಲೀಲ ಚಿತ್ರ ನಿರ್ಮಾಣ: ಮಧ್ಯಂತರ ಜಾಮೀನು ಕೋರಿದ ಬಾಲಿವುಡ್ ನ ಮತ್ತೋರ್ವಳು ನಟಿ
ಯಡಿಯೂರಪ್ಪ ಕಣ್ಣೀರು ನೋಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ರಾಜಾಹುಲಿ!