ಸಚಿವರಾದರೂ ಜೀಪ್ ನಿಂದ ಇಳಿದು ಸಾಮಾನ್ಯರಂತೆ ನಡೆದ ಸಚಿವ ಅಂಗಾರ! | ಇದು ಸರಳತೆ ಅಲ್ಲ, ವೈಫಲ್ಯ! - Mahanayaka
4:36 AM Saturday 9 - November 2024

ಸಚಿವರಾದರೂ ಜೀಪ್ ನಿಂದ ಇಳಿದು ಸಾಮಾನ್ಯರಂತೆ ನಡೆದ ಸಚಿವ ಅಂಗಾರ! | ಇದು ಸರಳತೆ ಅಲ್ಲ, ವೈಫಲ್ಯ!

angara
09/08/2021

ಸುಳ್ಯ: ಬಾಯಲ್ಲಿ ಕೇವಲ ಹಿಂದುತ್ವ, ರಾಷ್ಟ್ರವಾದದ ನಾಲ್ಕು ಮಾತುಗಳನ್ನಾಡಿದರೆ ಸಾಕು, ಅಭಿವೃದ್ಧಿ ಮಾಡದಿದ್ದರೂ ಜನ ವೋಟ್ ಹಾಕ್ತಾರೆ. ಶಾಸಕರಾಗಿ, ಸಂಸದರಾಗಿ ಆಯ್ಕೆಯಾಗ್ತಾರೆ ಎನ್ನುವ ಭಾವನೆ ಜನಪ್ರತಿನಿಧಿಗಳಲ್ಲಿ ಇದೀಗ ಬಂದು ಹೋಗಿದೆ. ಸುಳ್ಯದ ಅಂಗಾರ ಎಂದೇ ಖ್ಯಾತಿ ಪಡೆದಿರುವ ಸಚಿವ ಅಂಗಾರ ಸೋಲಿಲ್ಲದ ಸರದಾರ ಎನಿಸಿಕೊಂಡರೂ, ಅವರ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೋಗುವ ರಸ್ತೆಗಳ ದುಸ್ಥಿತಿ ಅವರ ಅಭಿವೃದ್ಧಿಯ ಸೂಚಕವಾಗಿ ಕಂಡು ಬಂದಿದೆ.

ಸಚಿವ ಅಂಗಾರ ಅವರ ಕ್ಷೇತ್ರದ ಗ್ರಾಮೀಣ ರಸ್ತೆಗಳ ಕಳಪೆ ಪ್ರದರ್ಶನವಾಗಿದ್ದು, ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ. ಸುಳ್ಯ ತಾಲೂಕಿನ ಅಲೆಟ್ಟಿ ಎಂಬಲ್ಲಿ ನಡೆದಿದೆ. ಬೆಟ್ಟ ಗುಡ್ಡಗಳನ್ನು ಹತ್ತುವ ಸಾಮರ್ಥ್ಯದ ಜೀಪ್ ನಲ್ಲಿ ಅಂಗಾರರು ಪ್ರಯಾಣಿಸಿದ್ದು, ಆದರೆ, ಮಳೆಯಿಂದಾಗಿ ಮಣ್ಣಿನ ರಸ್ತೆಯಲ್ಲಿ ಜೀಪ್ ಮುಂದೆ ಹೋಗಲೇ ಇಲ್ಲ. ಈ ವೇಳೆ ಅಂಗಾರರು ಜೀಪ್ ನಿಂದ ಇಳಿದು ನಡೆಯುತ್ತಾ ಮುಂದೆ ಹೋಗಿದ್ದಾರೆ.

ಅಲೆಟ್ಟಿಯಲ್ಲಿ  ಹಲವಾರು ವರ್ಷಗಳಿಂದ ಈ ಸಮಸ್ಯೆ ಇದೆ. ಆದರೆ, ಇದೇ ದಾರಿಯಲ್ಲಿ ಮತ ಕೇಳಲು ಹೋಗುವ ಸಚಿವ ಅಂಗಾರರಿಗೆ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಇಚ್ಛಾಶಕ್ತಿಯೇ ಇರಲಿಲ್ಲವೋ ತಿಳಿದಿಲ್ಲ, ಆದರೆ ಈವರೆಗೆ ರಸ್ತೆ ಅಭಿವೃದ್ಧಿಯಾಗಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಇಲ್ಲಿನ ನಿವಾಸಿಗಳು ಮತದಾನವನ್ನು ಕೂಡ ಬಹಿಷ್ಕರಿಸಿದ್ದರು ಎನ್ನುವ ಮಾಹಿತಿ ಕೂಡ ಇದೆ.

ಇನ್ನೂ ಇಲ್ಲಿಯವರೆಗೆ ಅಂಗಾರರಿಗೆ ಈ ಬಗ್ಗೆ ಮನವಿ ಮಾಡಿದರೂ ರಸ್ತೆ ಸರಿಯಾಗಿಲ್ಲ. ಇದೀಗ ಸ್ವತಃ ಅಂಗಾರರೇ ಈ ರಸ್ತೆ ಅವ್ಯವಸ್ಥೆಯ ಕಷ್ಟವನ್ನು ಅನುಭವಿಸಿದ್ದಾರೆ ಇನ್ನಾದರೂ ಈ ಸಮಸ್ಯೆಯನ್ನು ಬಗೆ ಹರಿಸುತ್ತಾರೋ ನೋಡಬೇಕು ಎಂದು ಇಲ್ಲಿನ ನಿವಾಸಿಗಳು ಇದೀಗ ಮಾತನಾಡಿಕೊಳ್ಳುತ್ತಿದ್ದಾರೆ.




ಅಂಗಾರರ ಫೋಟೋವನ್ನು ಎಡಿಟ್ ಮಾಡಿ, ಸರಳತೆ ಮೆರೆದ ಸಚಿವರು, ನಡೆದುಕೊಂಡೇ ಕ್ಷೇತ್ರ ಪ್ರದಕ್ಷಿಣೆ ಹಾಕಿದ ಸಚಿವರು ಎಂದು ತಿರುಚುವ ಪ್ರಯತ್ನ ಮಾಡದೆ, ನಿರಂತರವಾಗಿ ತಮ್ಮನ್ನು ಗೆಲ್ಲಿಸುವ ಸುಳ್ಯ ಕ್ಷೇತ್ರದ ಗ್ರಾಮೀಣ ಭಾಗದ ಬಗ್ಗೆ ಇನ್ನಾದರೂ ಬಿಜೆಪಿಗರು ಮುಂದಾಗಲಿ ಎನ್ನುವ ಒತ್ತಾಯಗಳು ಕೇಳಿ ಬಂದಿವೆ.

ಇನ್ನಷ್ಟು ಸುದ್ದಿಗಳು…

ಒಂದಕ್ಕೆ ಎರಡು ತೆಗೆದು ಬಿಡಿ ಅನ್ನೋವಷ್ಟು ಬಿಜೆಪಿ ಬೆಳೆದಿದೆ |  ಸಚಿವ ಕೆ.ಎಸ್.ಈಶ್ವರಪ್ಪ

ವಾಟ್ಸಾಪ್ ಮೂಲಕ ಕೊವಿಡ್ ಲಸಿಕೆ ಪ್ರಮಾಣ ಪತ್ರ ಪಡೆಯುವುದು ಹೇಗೆ?

ಹೃದಯ ವಿದ್ರಾವಕ ಘಟನೆ: ಮಗುವನ್ನು ರಕ್ಷಿಸಲು ಕೆರೆಗೆ ಹಾರಿದ ತಾಯಿಯೂ ಸಾವು

BIG NEWS: ಸಂಪುಟ ದರ್ಜೆ ಸ್ಥಾನ ಮಾನವನ್ನು ತಿರಸ್ಕರಿಸಿದ ಮಾಜಿ ಸಿಎಂ ಯಡಿಯೂರಪ್ಪ

ನೀವು ಬೆಳೆದ ಬೆಳೆಗಳನ್ನು ಕೊಟ್ಟು, ಐಶಾರಾಮಿ ಕಾರು ಕೊಂಡುಹೋಗಿ: ಟೊಯೋಟಾದಿಂದ ರೈತರಿಗೆ ಆಫರ್

ಸರ್ಕಾರದ ಹಣದಲ್ಲಿ ನಡೆಯುವ ಕ್ಯಾಂಟೀನ್ ಗೆ ಇಂದಿರಾ ಹೆಸರು ಬೇಡ | ಸಿ.ಟಿ.ರವಿ ಕಿಡಿ

ಇಂದಿರಾ ಇಲ್ಲದಿರುತ್ತಿದ್ದರೆ, ಸಿ.ಟಿ.ರವಿ ಹರಿದ ಚಡ್ಡಿ ಹಾಕಿಕೊಂಡು ಯಾರದ್ದೋ ಮನೆಯ ಸೆಗಣಿ ಬಾಚುತ್ತಿರುತ್ತಿದ್ದರು | ಕಾಂಗ್ರೆಸ್

ಇತ್ತೀಚಿನ ಸುದ್ದಿ