ಶಾಲೆ ಆರಂಭ: ಸಚಿವರಿಗೆ ಸಿಎಂ ಬೊಮ್ಮಾಯಿ ನೀಡಿದ ಖಡಕ್ ಸೂಚನೆ ಏನು?
ಬೆಂಗಳೂರು: ಒಂದೂವರೆ ವರ್ಷಗಳ ಬಳಿಕ ಇಂದು ಶಾಲೆಗಳು ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಚಿವರಿಗೆ ಖಡಕ್ ಸೂಚನೆಯನ್ನು ನೀಡಿದ್ದು, ಶಾಲೆಗಳಿಗೆ ತೆರಳಿ ಮಕ್ಕಳು ಹಾಗೂ ಪೋಷಕರಲ್ಲಿ ಧೈರ್ಯ ತುಂಬುವಂತೆ ಹೇಳಿದ್ದಾರೆ.
ಶಿಕ್ಷಕರನ್ನು ಪ್ರೋತ್ಸಾಹಿಸಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ. ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಬೇಕು. ಶಾಲೆ ಆರಂಭಿಸಲು ಸರ್ಕಾರ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೂ ಸಚಿವರು ಹೋಗಿ ಮಕ್ಕಳು ಹಾಗೂ ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸದಬೇಕು . ಸಚಿವರು ತಮ್ಮ ಜಿಲ್ಲೆಯ ಶಾಲೆಗಳಿಗೆ ಭೇಟಿ ಕೊಟ್ಟು ಶಾಲೆಗಳಲ್ಲಿ ತೆಗೆದುಕೊಂಡಿರುವ ಮುಂಜಾಗೃತಾ ಕ್ರಮಗಳನ್ನು ಪರಿಶೀಲಿಸುವುದರಿಂದ ಪಾಲಕ-ಪೋಷಕರಲ್ಲಿ ವಿಶ್ವಾಸ ಮೂಡುತ್ತದೆ. ಈ ನಿರ್ದೇಶನವನ್ನು ಎಲ್ಲ ಸಚಿವರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬೊಮ್ಮಾಯಿ ಸೂಚಿಸಿದ್ದಾರೆ.
ಶಾಲೆಗೆ ಬರುವ ಮಕ್ಕಳು ಮತ್ತು ಪಾಲಕರು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು. ಜೊತೆಗೆ ಇತರ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಯಾವುದೇ ಆತಂಕ ಇಲ್ಲದೇ ಸರ್ಕಾರದ ಜತೆ ಸಹಕರಿಸಬೇಕು ಎಂದು ಪಾಲಕರು ಮತ್ತು ಪೋಷಕರರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಳು…
ಅಪ್ರಾಪ್ತ ಬಾಲಕಿಯ ಮೊಬೈಲ್ ಗೆ ಅಶ್ಲೀಲ ಚಿತ್ರ ಕಳುಹಿಸಿದ ಮಹಿಳೆ | ಮಹಿಳೆಯ ವಿಲಕ್ಷಣ ಮನಸ್ಥಿತಿಗೆ ಬೆಚ್ಚಿಬಿದ್ದ ಪೋಷಕರು
ನಾಳೆಯಿಂದ ಶಾಲಾ ಕಾಲೇಜು ಆರಂಭ | ಕೊವಿಡ್ ಗೆ ಸೆಡ್ಡು ಹೊಡೆಯಲು ಸರ್ಕಾರದ ನಡೆಸಿರುವ ಸಿದ್ಧತೆ ಹೇಗಿದೆ ಗೊತ್ತಾ?
ಆಗಸ್ಟ್ 23ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಕೀಯ ಚಿಂತನೆ- ಪರ್ಯಾಯ ರಾಜಕಾರಣದ ಕುರಿತು ಒಂದು ಸಂವಾದ ಕಾರ್ಯಕ್ರಮ
ಕೊವಿಡ್ ಮಾರ್ಗಸೂಚಿಗೆ ಅಂಜದೇ ಗಣೇಶೋತ್ಸವ ನಡೆಸಲು ಶಾಸಕ ಯತ್ನಾಳ್ ಕರೆ!
ಕೊಲೆ ಆರೋಪಿ ಭವ್ಯ ಸ್ವಾಗತ: ಜೈಲಿನಿಂದ ಹೊರ ಬಂದವರೇ ಕಾಂಗ್ರೆಸ್ ಗೆ ಶ್ರೇಷ್ಠರು: ಬಿಜೆಪಿ ಟೀಕೆ
ಬಿಜೆಪಿಯವರು ಜನಾಶೀರ್ವಾದ ಯಾತ್ರೆಯಲ್ಲ, ಕ್ಷಮೆಯಾಚನೆ ಯಾತ್ರೆ ಮಾಡಬೇಕು | ಮಾಜಿ ಸಂಸದ ಚಂದ್ರಪ್ಪ ಆಕ್ರೋಶ