ರಾಜಸ್ಥಾನ ಸಚಿವ ಸ್ಥಾನದಿಂದ ಔಟ್: 'ಕೆಂಪು ಡೈರಿ' ರಿಲೀಸ್ ಮಾಡಿ ಗುದ್ದು ನೀಡಿದ ಗುಧಾ..! - Mahanayaka

ರಾಜಸ್ಥಾನ ಸಚಿವ ಸ್ಥಾನದಿಂದ ಔಟ್: ‘ಕೆಂಪು ಡೈರಿ’ ರಿಲೀಸ್ ಮಾಡಿ ಗುದ್ದು ನೀಡಿದ ಗುಧಾ..!

rajendra sigh
02/08/2023

ರಾಜಸ್ಥಾನ ರಾಜ್ಯ ಸರ್ಕಾರದ ಸಚಿವ ಸಂಪುಟದಿಂದ ವಜಾಗೊಂಡ ಕಾಂಗ್ರೆಸ್‌ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರು ಕೆಂಪು ಡೈರಿಯ ಮೂರು ಪುಟಗಳನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಸಿಎಂ ಪುತ್ರ ಮತ್ತು ಆರ್‌ಸಿಎ ವಹಿವಾಟುಗಳನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಸರ್ಕಾರ ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಇತರ ಸಚಿವರ ವಿರುದ್ಧ ಗುಧಾ ಕೆಲ ದಿನಗಳಿಂದ ವಾಗ್ದಾಳಿ ನಡೆಸುತ್ತಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಡೈರಿ ಬಿಡುಗಡೆ ಮಾಡಿದ ಅವರು, ಅದರಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮುಖ್ಯಮಂತ್ರಿಯ ಆಪ್ತ ಧರ್ಮೇಂದ್ರ ರಾಥೋಡ್ ಅವರ ಕೈಬರಹವಿದೆ ಎಂದು ಹೇಳಿದ್ದಾರೆ.

ಅಂದಹಾಗೇ ಈ ಡೈರಿಯಲ್ಲಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ(ಆರ್‌ಸಿಎ) ವ್ಯವಹಾರಗಳು ಕೋಡ್ ವರ್ಡ್‌ಗಳಲ್ಲಿವೆ ಮತ್ತು ಮುಖ್ಯಮಂತ್ರಿ ಕಾರ್ಯದರ್ಶಿ ಮತ್ತು ಸಿಎಂ ಪುತ್ರ ವೈಭವ್ ಗೆಹ್ಲೋಟ್ ಅವರ ಬಗ್ಗೆಯೂ ಬರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

“ವೈಭವ್ ಜಿ ಮತ್ತು ನಾನು ಇಬ್ಬರೂ ಆರ್‌ಸಿಎ ಚುನಾವಣಾ ವೆಚ್ಚದ ಬಗ್ಗೆ ಚರ್ಚಿಸಿದ್ದೇವೆ. ನಿರ್ಧರಿಸಿದ ನಂತರವೂ ಭವಾನಿ ಸಮೋಟಾ ಜನರ ಹಣವನ್ನು ಯಾಕೆ ನೀಡುತ್ತಿಲ್ಲ. ಭವಾನಿ ಸಮೋಟಾ ಅವರು ಹೆಚ್ಚಿನ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಇದು ಸರಿಯಲ್ಲ ಎಂದು ನಾನು ಹೇಳಿದೆ. ನೀವು ಅದನ್ನು ಈಡೇರಿಸಿದರೆ ನಾನು ಅದನ್ನು ಸಿಪಿ ಸರ್ ಅವರ ತಮನಕ್ಕೆ ತರುತ್ತೇನೆ ಎಂದು ಭವಾನಿ ಸಮೋಟಾ ಹೇಳಿದರು. ನಂತರ ನಾನು ಜನವರಿ 31 ರೊಳಗೆ ನಿಮಗೆ ಹೇಳುತ್ತೇನೆ. ಇದು ಬಿಡುಗಡೆಯಾದ ಡೈರಿಯಲ್ಲಿನ ಪ್ರಮುಖ ಅಂಶಗಳು.

ಭವಾನಿ ಸಮೋಟಾ ಅವರು ಪ್ರಸ್ತುತ ಆರ್ ಸಿಎ ಕಾರ್ಯದರ್ಶಿಯಾಗಿದ್ದಾರೆ. ಅವರು ಸ್ಪೀಕರ್, ಡಾ. ಸಿ.ಪಿ. ಜೋಶಿ ಅವರಿಗೆ ನಿಕಟರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಅವರು ಪ್ರಸ್ತುತ ಆರ್ ಸಿಎ ಅಧ್ಯಕ್ಷರಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ