ದೀನ್ ದಯಾಳರಿಂದ ದೇಶಕ್ಕಾಗಿ ಜೀವ ತ್ಯಾಗ: ಸುರೇಂದ್ರ - Mahanayaka
1:28 PM Thursday 12 - December 2024

ದೀನ್ ದಯಾಳರಿಂದ ದೇಶಕ್ಕಾಗಿ ಜೀವ ತ್ಯಾಗ: ಸುರೇಂದ್ರ

bjp
25/09/2024

ಮೂಡಿಗೆರೆ: ಎಕಾಥ್ಮ ಮಾನವತವಾದದ ಪಿತಾಮಹ ಪಂಡಿತ್ ದೀನ್ ದಯಾಳರ ನೆನಪು. ಕಾರ್ಯ ಭಾರತದ ಚರಿತ್ರೆಯಲ್ಲಿ ಅಜರಾಮರ ಎಂದು ಬಿಜೆಪಿ ಮಾಜಿ ಅಧ್ಯಕ್ಷ ಡಿ.ಎಸ್.ಸುರೇಂದ್ರ ತಿಳಿಸಿದರು.

ಅವರು ಇಲ್ಲಿನ ಪಕ್ಷದ ಕಚೇರಿಯಲ್ಲಿ ಪಂಡಿತ್ ದೀನ್ ದಯಾಳರ ಜನ್ಮ ದಿನಾಚರಣೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿ, ದೇಶದ ತನ್ನ ಮುಂದಿನ ಪೀಳಿಗೆಗಾಗಿ ಜೀವನವನ್ನೆ ತ್ಯಾಗ ಮಾಡಿದವರು. ತಮದೆ ತಾಯಿ ಕಳೆದುಕೊಂಡ. ಅನಾಥರಾಗಿ ಬಾಲ್ಯ ಕಳೆದ ಇವರು ಮುಂದೆ ಅದರ್ಷ ವಿದ್ಯಾರ್ಥಿ ಅಗಿ. ನಂತರ ಜನಸಂಘದ ಜವಬ್ದಾರಿ ಹೊತ್ತು. ಅಧಿಕಾರದ ಮದದಿಂದ ಮೆರೆಯುತ್ತಿದ್ದ ಕಾಂಗ್ರೆಸ್ ವಿರುದ್ದ ಪ್ರತಿಪಕ್ಷದ ನಾಯಕನಾಗಿ. ದೇಶ ದರ್ಮ ಸಮಾಜಕ್ಕಾಗಿ ಹೋರಾಟ ಮಾಡಿ ಒಂದು ಪಕ್ಷವನ್ನು ಹುಟ್ಟು ಹಾಕಲು ಕಾರಣರಾದ ಇವರು ಇಂದು ಬಿಜೆಪಿ ಅಧಿಕಾರದಲ್ಲಿ ಇರಲು ಕಾರಣರಾಗಿ ಕೋಟ್ಯಾಂತರ ಯುವಜನತೆಗೆ ಮಾದರಿ ಅಗಿರುವ ಇವರ ಬದುಕು ಮಾದರಿ ಎಂದರು.

ದೀಪಕ್ ದೊಡ್ಡಯ್ಯ ಮಾತನಾಡಿ, ದೀನದಯಾಳರ ಅಲೋಚನೆ ಮಹತ್ವದ್ದು ದೇಶಕ್ಕಾಗಿ ಪಕ್ಷಕ್ಕಾಗಿ ಜೀವನವನ್ನೇ ರಾಷ್ಟ ನಿರ್ಮಾಣಕ್ಕಾಗಿ ಮುಡಿಪಿಟ್ಟು ಪ್ರಾಣ ತ್ಯಾಗ ಮಾಡಿದರು. ಇವರ ಅಂತ್ಯೋದಯ ವಾದವೆ ಇಂದು ಮಾನ್ಯ ಮೋದಿಜಿಯವರ ಆತ್ಮ ನಿರ್ಭರ ಭಾರತವಾಗಿದೆ ಎಂದರು.

ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಮಾತನಾಡಿ, ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ಇಂದು ದೊರಕಿದ್ದಲ್ಲಿ ದೀನ್ ದಯಾಳರಂತ ಮಹನೀಯರ ತ್ಯಾಗವೆ ಕಾತಣ ಎಂದರು.

ಕಾರ್ಯಕ್ರಮದಲ್ಲಿ ಸರೋಜ ಸುರೇಂದ್ರ, ಪ್ರಶಾಂತ್, ಲೊಕೇಶ್, ದನಿಕ್ ಕೋಡದಿಣ್ಣೆ, ನಯನತಳವಾರ, ಪದ್ಮನಾಭ್, ಪರಿಕ್ಷಿತ್ ಜಾವಳಿ, ತಾರೇಶ್, ಸುರೇಶ್ ಶೆಟ್ಟಿ, ಪಪಂ ಸದಸ್ಯ ಮನೋಜ್, ನಂದನ್ ಕುಂದೂರು, ಅಭಿಶೇಕ್, ಪ್ರವೀಣ್ ಬಿದ್ರಹಳ್ಳಿ ಮತ್ತಿತರರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ