ಜಲ ಸಂಬಂಧಿ ಸಂಶೋಧನೆಗಾಗಿ ಸಹಜ್ ಕೆ.ವಿ. ಅವರಿಗೆ ಡಾಕ್ಟರೇಟ್ ಪದವಿ - Mahanayaka

ಜಲ ಸಂಬಂಧಿ ಸಂಶೋಧನೆಗಾಗಿ ಸಹಜ್ ಕೆ.ವಿ. ಅವರಿಗೆ ಡಾಕ್ಟರೇಟ್ ಪದವಿ

sahaj
11/11/2023

ಮಂಗಳೂರು: ಇಲ್ಲಿನ ಪ್ರತಿಷ್ಠಿತ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಕರ್ನಾಟಕ NIT-K (ಎನ್ ಐಟಿಕೆ) ಜಲ ಸಂಬಂಧಿ ಸಂಶೋಧನೆಗಾಗಿ ಸಹಜ್ ಕೆ.ವಿ ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಗಿದೆ.

ಜಲ ಸಂಪನ್ಮೂಲ ಮತ್ತು ಸಾಗರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಕೆ.ವಾರಿಜ ಅವರ ಉಪಸ್ಥಿತಿಯಲ್ಲಿ ನವೆಂಬರ್ 4ರಂದು ಸುರತ್ಕಲ್ ನಲ್ಲಿ ನಡೆದ ಎನ್ ಐಟಿಕೆ 21ನೇ ಘಟಿಕೋತ್ಸವ ದಿನದಂದು ವಾಟರ್ ರಿಸೋಸರ್ಸ್ ಆ್ಯಂಡ್ ಓಷನ್ ಎಂಜನಿಯರಿಂಗ್ (Water Resources and Ocean Engineering) ವಿಭಾಗದಲ್ಲಿ ನಡೆದ ಸಮಾರಂಭದಲ್ಲಿ  ಸಹಜ್ ಕೆ.ವಿ. ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಯಿತು.

ಸಹಜ್ ಅವರು ಇಲ್ಲಿನ ಕೊಟ್ಟಾರ ಪಡುಬೆಟ್ಟು ಕಾಂತಪ್ಪ ಆಲಂಗಾರು ಮತ್ತು ವಿಮಲ ಕೆ. ದಂಪತಿಯ ಪುತ್ರರಾಗಿದ್ದಾರೆ. ಪ್ರೊ. ಟಿ.ನಾಸರ್ ಅವರ  ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಪರ್ಫೊಮೆನ್ಸ್ ಬ್ಯಾಫಲ್ಸ್ ಇನ್ ಎ ಸ್ವೇ ಎಕ್ಸೈಟೆಡ್ ಸ್ಲೋಶಿಂಗ್ ರೆಕ್ಟೆಂಗುಲರ್ ಟ್ಯಾಂಕ್ (Performance Baffles in a Sway Excited Sloshing Rectangular Tank) ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.


Provided by

ಸಹಜ್ ಪಣಂಬೂರಿನ ಕೇಂದ್ರಿಯ ವಿದ್ಯಾಲಯದಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದು, ಗಾಂಧಿನಗರ ಗೋಕರ್ಣನಾಥ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಮತ್ತು ಸಹ್ಯಾದ್ರಿ ಕಾಲೇಜಿನಲ್ಲಿ ಎಂಟೆಕ್ ಪದವಿ ಪೂರೈಸಿದ್ದಾರೆ.

ಎನ್ ಐಟಿಕೆ ಆಡಳಿತ ಮಂಡಳಿ ಮತ್ತು ಮಾರ್ಗದರ್ಶನ ಮಾಡಿದ ಪ್ರೊ. ನಾಸರ್ ಅವರಿಗೆ ಸಹಜ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿ