ಸ್ಕಾಟ್ ಲ್ಯಾಂಡಿನಲ್ಲಿ ಎಂ.ಎಸ್ಸಿ ಪದವಿಯಲ್ಲಿ ಉನ್ನತ ಸ್ಥಾನ ಪಡೆದ ಸಹದೇವ್ ಪಟೇಲ್
11/12/2024
ಕೊಟ್ಟಿಗೆಹಾರ: ಉದುಸೆ ಗ್ರಾಮದ ಯುವಕ ಸ್ಕಾಟ್ ಲ್ಯಾಂಡಿನಲ್ಲಿ ಎಂ.ಎಸ್ಸಿ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ಇವರು ಯುನೈಟೆಡ್ ಕಿಂಗ್ ಡಂ, ಸ್ಕಾಟ್ ಲ್ಯಾಂಡಿನ ಹೆರಿಯಟ್ ವ್ಯಾಟ್ ವಿಶ್ವ ವಿದ್ಯಾಲಯದಲ್ಲಿ ಎಂ.ಎಸ್ಸಿ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಯು.ಪಿ.ಸಹದೇವ್ ಪಟೇಲ್ ಉದುಸೆ ಗ್ರಾಮದ ಯು.ಇ.ಪ್ರಭಾಕರ್ ಹಾಗೂ ಬಿ.ಜಿ.ಪೂರ್ಣ ದಂಪತಿಗಳ ಪುತ್ರ.ಇವರ ಸಾಧನೆಗೆ ಗ್ರಾಮಸ್ಥರು ವಿದ್ಯಾಭಿಮಾನಿಗಳು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97