ಸಹೋದರನೇ ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದಾನೆ: ಪೊಲೀಸರ ಮೊರೆ ಹೋದ ಯುವತಿ - Mahanayaka
3:09 AM Wednesday 11 - December 2024

ಸಹೋದರನೇ ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದಾನೆ: ಪೊಲೀಸರ ಮೊರೆ ಹೋದ ಯುವತಿ

jammu kashmeer
12/08/2021

ಶ್ರೀನಗರ: ತನ್ನ ಅಣ್ಣನೇ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದಾನೆ ಎಂದು ಆರೋಪಿಸಿ, ಯುವತಿಯೋರ್ವಳು ಪೊಲೀಸರಿಗೆ ದೂರು ನೀಡಿದ್ದು, ಯುವತಿಯ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಮಾಮ್ಲಾ ಉತ್ತರ ಕಾಶ್ಮೀರದ ಬಂಡಿಪೋರಾ ವಾತ್ರಿನಾ ಗ್ರಾಮದಲ್ಲಿ  ಈ ಘಟನೆ ನಡೆದಿದ್ದು, 23 ವರ್ಷ ವಯಸ್ಸಿನ ಯುವತಿ ತನ್ನ 26 ವರ್ಷದ ವಯಸ್ಸಿನ ಸಹೋದರನ ಮೇಲೆಯೇ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಸಹೋದರಿಯ ದೂರಿನನ್ವಯ ಬಂಡಿಪೋರಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಹೋದರ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದು, ಸಾಮಾಜಿಕ ಕಳಂಕದ ಭೀತಿಯಿಂದ ಈ ವಿಚಾರವನ್ನು ಮುಚ್ಚಿಟ್ಟಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಇನ್ನೂ ಈ ಸಂಬಂಧ  ಪೊಲೀಸರು ಆರೋಪಿ ಸಹೋದರನ ವಿರುದ್ಧ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನಷ್ಟು ಸುದ್ದಿಗಳು…

ಒಂದು ಬಾರಿ ಅವನು ನನ್ನ ಜೊತೆಗೆ ಲಿಮಿಟ್ ಮೀರಿ ವರ್ತಿಸಿದ್ದ: ಕಹಿ ನೆನಪು ಹಂಚಿಕೊಂಡ ಶಮಿತಾ ಶೆಟ್ಟಿ

ಇಳೆಯದಳಪತಿ ನಟ ವಿಜಯ್-ಎಂ.ಎಸ್.ಧೋನಿ ಭೇಟಿ | ಕಾರಣ ಏನು ಗೊತ್ತಾ?

ಬಿಜೆಪಿ ಸರ್ಕಾರದ ವಿರುದ್ಧವೇ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರತಿಭಟನೆ | ಕಾರಣ ಏನು ಗೊತ್ತಾ?

ಕಾಂಗ್ರೆಸ್ ನವರು ಬೇಕಿದ್ದರೆ ‘ನೆಹರೂ ಹುಕ್ಕಾ ಬಾರ್’ ತೆರೆಯಲಿ: ಸಿ.ಟಿ.ರವಿ ಹೇಳಿಕೆ

ಪೊಲೀಸರ ನಡುವೆಯೇ ಘರ್ಷಣೆ: ಹೆಡ್ ಕಾನ್ಸ್ ಟೇಬಲ್ ಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಕಾನ್ಸ್ ಟೇಬಲ್

ಎಸೆಸೆಲ್ಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದ ವಿದ್ಯಾರ್ಥಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಇತ್ತೀಚಿನ ಸುದ್ದಿ