ಇಬ್ಬರು ಸಹೋದರಿಯರು ನಾಪತ್ತೆ: ದೂರು ದಾಖಲು - Mahanayaka
12:20 PM Thursday 23 - January 2025

ಇಬ್ಬರು ಸಹೋದರಿಯರು ನಾಪತ್ತೆ: ದೂರು ದಾಖಲು

missing
11/02/2022

ಮಂಗಳೂರು: ರಾತ್ರಿ ಮಲಗಿದ್ದ ಸ್ಥಳದಿಂದಲೇ ಸಹೋದರಿಯರಿಬ್ಬರು ನಾಪತ್ತೆಯಾಗಿರುವ ಘಟನೆ‌ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಜ್ಪೆಯ ಕೊಂಚಾರ್ ಎಂಬಲ್ಲಿನ ಬಾಡಿಗೆ ಮನೆ ನಿವಾಸಿಗಳಾದ ಮುಬೀನಾ(22) ಹಾಗೂ ಬುಶ್ರಾ (21) ನಾಪತ್ತೆಯಾದ ಸಹೋದರಿಯರು.

ಮುಬೀನಾ ಹಾಗೂ ಬುಶ್ರಾ ಫೆ.7ರಂದು ರಾತ್ರಿ ಸುಮಾರು 12.30ಕ್ಕೆ ಊಟ ಮಾಡಿ ಮನೆಯಲ್ಲಿ ಮಲಗಿದ್ದರು. ತಡರಾತ್ರಿ 2 ಗಂಟೆಗೆ ಅವರ ತಂದೆ ಎದ್ದು ನೋಡಿದಾಗ ಕಿರಿಯ ಪುತ್ರಿ ಬುಶ್ರಾ ಮನೆಯಲ್ಲಿ ಕಂಡಿರಲಿಲ್ಲ. ಇದರಿಂದ ಎಲ್ಲ ಕಡೆಗಳಲ್ಲಿ ಹುಡುಕಾಟ ನಡೆಸಲಾಗಿದೆ. ಈ ಸಂದರ್ಭ ಮತ್ತೋರ್ವ ಪುತ್ರಿ ಮುಬೀನಾ ಕೂಡಾ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಎಲ್ಲೆಡೆ ಹುಡುಕಾಟ ನಡೆಸಿದರೂ, ಇಬ್ಬರೂ ಪತ್ತೆಯಾಗಿಲ್ಲ. ಈ ಬಗ್ಗೆ ಪೊಷಕರು ಬಜ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಾಲಭಾದೆ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು

ಸಬ್ ಇನ್ಸ್ ಪೆಕ್ಟರ್ ನ ಕಾರಿನ ಗಾಜು ಒಡೆದು, ಹಣ ಲ್ಯಾಪ್ ಟಾಪ್ ದೋಚಿದ ಕಳ್ಳ!

ಸಮವಸ್ತ್ರ ವಿವಾದ: ಹೈಕೋರ್ಟ್ ನಿಂದ ಮಧ್ಯಂತರ ಆದೇಶ

ಜನಪದ ಕಲಾವಿದ ಮಹಾದೇವ ವೇಳಿಪ ನಿಧನ

ಮುಸ್ಲಿಮ್ ಮಹಿಳೆಯರ ಮೇಲಿನ ಶೋಷಣೆ ತಡೆಯಬೇಕಿದೆ | ಪ್ರಧಾನಿ ಮೋದಿ

ಇತ್ತೀಚಿನ ಸುದ್ದಿ