ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಆರೋಪ: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅರೆಸ್ಟ್
ಮಂಗಳೂರು: ಸಹೋದ್ಯೋಗಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಫಾರೂಕ್ ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಪಾಂಡೇಶ್ವರದ ಕಚೇರಿಯಲ್ಲಿ ಯುವತಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಆರೋಪಿ ಫಾರೂಕ್ ಯುವತಿಗೆ ವಾಟ್ಸಾಪ್ ನಲ್ಲಿ ನಗ್ನ ಚಿತ್ರಗಳನ್ನು ಕಳುಹಿಸಿ, ಅಸಭ್ಯ ವರ್ತನೆ ತೋರಿದ್ದರು ಎನ್ನಲಾಗಿದೆ.
ಫಾರೂಕ್ ನ್ನು ಯುವತಿ ನಿರ್ಲಕ್ಷ್ಯಸಿದ್ದು, ಆತನ ಒತ್ತಾಯಕ್ಕೆ ಮಣಿಯದಿದ್ದ ಸಂದರ್ಭದಲ್ಲಿ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇದರಿಂದ ನೊಂದ ಯುವತಿ ಕೆಲಸ ಕೂಡ ಬಿಟ್ಟಿದ್ದರು ಎಂದು ವರದಿಯಾಗಿದೆ.
ಇದೀಗ ನೊಂದ ಯುವತಿ ನೀಡಿದ ದೂರಿನನ್ವಯ ಮಂಗಳೂರಿನ ಮಹಿಳಾ ಠಾಣಾ ಪೊಲೀಸರು ಆರೋಪಿ ಫಾರೂಕ್ ನನ್ನು ಬಂಧಿಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಇನ್ನಷ್ಟು ಸುದ್ದಿಗಳು…
ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿತ: ಶಿಕ್ಷಕನ ಕೃತ್ಯದ ವಿಡಿಯೋ ವೈರಲ್ ಮಾಡಿದ ವಿದ್ಯಾರ್ಥಿಗಳು
ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ದೇವಸ್ಥಾನದ ಮೇಲೆ ಅಪರಿಚಿತರಿಂದ ದಾಳಿ
ಅಮಾನವೀಯ ಘಟನೆ: ಹೊಲದಲ್ಲಿ ಗನ್ ಪಾಯಿಂಟ್ ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ
ಕೋಟಿಗೊಬ್ಬ-3 ಬಿಡುಗಡೆಗೆ ಯಾರಿಂದ ತೊಂದರೆ ಆಯ್ತು ಅಂತ ಗೊತ್ತಿದೆ | ವಿಡಿಯೋ ಶೇರ್ ಮಾಡಿದ ಕಿಚ್ಚ ಸುದೀಪ್
ನೈತಿಕ ಪೋಲಿಸ್ ಗಿರಿ: ಸಿಎಂ ಹೇಳಿಕೆ ದುಷ್ಕ್ರತ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತಿದೆ | ಸಿಪಿಐಎಂ ಆಕ್ರೋಶ
ಸಂಘ ಪರಿವಾರದ ಓಲೈಕೆಗೆ ಸಿಎಂ ಬೊಮ್ಮಾಯಿ ಈ ಮಟ್ಟಕ್ಕೆ ಇಳಿಯಬಾರದಿತ್ತು | ಸಿದ್ದರಾಮಯ್ಯ ಆಕ್ರೋಶ
ಕಂತ್ರಿ ನಾಯಿಗಳು ನೀವು, ಹೊಟ್ಟೆಗೆ ಏನ್ ತಿಂತೀರಾ? | ಉಗ್ರಪ್ಪಗೆ ಉಗ್ರರೂಪ ತೋರಿಸಿದ ಕಾಂಗ್ರೆಸ್ ಕಾರ್ಯಕರ್ತೆ