ದಾಳಿಯ ಭಯಾನಕತೆಯನ್ನು ವಿವರಿಸಿದ ಸೈಫ್ ಅಲಿ ಖಾನ್: ‘ಕರೀನಾ ಜೊತೆಗಿದ್ದೆ, ಇದ್ದಕ್ಕಿದ್ದಂತೆ ಕಿರುಚಾಟ ಕೇಳಿಸಿತು’ ಎಂದ ನಟ!
ಜನವರಿ 16 ರಂದು ಮನೆಯ ಮೇಲೆ ನಡೆದ ದಾಳಿಯಲ್ಲಿ ಚೂರಿ ಇರಿತದ ಗಾಯಗಳಿಗೆ ಒಳಗಾದ ನಟ ಸೈಫ್ ಅಲಿ ಖಾನ್ ಗುರುವಾರ ಸಂಜೆ ಬಾಂದ್ರಾ ಪೊಲೀಸರಿಗೆ ಘಟನೆಯ ರಾತ್ರಿ ಏನಾಯಿತು ಎಂಬುದರ ಬಗ್ಗೆ ಹೇಳಿಕೆ ನೀಡಿದ್ದಾರೆ.
ಮೂಲಗಳ ಪ್ರಕಾರ, ಸೈಫ್ ಅಲಿ ಖಾನ್ ಮತ್ತು ಅವರ ಪತ್ನಿ, ನಟಿ ಕರೀನಾ ಕಪೂರ್ ಖಾನ್ ಅವರು 11 ನೇ ಮಹಡಿಯಲ್ಲಿರುವ ತಮ್ಮ ಮಲಗುವ ಕೋಣೆಯಲ್ಲಿದ್ದಾಗ ಮನೆಯ ಸಹಾಯಕ ಎಲಿಯಾಮಾ ಫಿಲಿಪ್ ಅವರ ಕಿರುಚಾಟವನ್ನು ಕೇಳಿದರು. ಫಿಲಿಪ್ ಕೂಡ ಮಲಗಿರುವ ಜೆಹ್ ನ ಕೋಣೆಗೆ ಧಾವಿಸಿದಾಗ, ಅಪರಿಚಿತ ಒಳನುಗ್ಗುವುದನ್ನು ಅವರು ನೋಡಿದ್ರು.
ಆಗ ಜೆಹ್ ಅಳುತ್ತಿದ್ದ. ಆಗ ಗೊಂದಲ ಉಂಟಾಯಿತು. ಹೋರಾಟದ ಸಮಯದಲ್ಲಿ ಆರೊಪಿಯು ಸೈಫ್ ಅಲಿ ಖಾನ್ ಅವರ ಬೆನ್ನು, ಕುತ್ತಿಗೆ ಮತ್ತು ತೋಳುಗಳಿಗೆ ಅನೇಕ ಬಾರಿ ಇರಿದಿದ್ದಾನೆ.
ಗಯಗಳ ಹೊರತಾಗಿಯೂ, ಸೈಫ್ ಅಲಿ ಖಾನ್ ಆರೋಪಿಯನ್ನು ದೂರ ತಳ್ಳುವಲ್ಲಿ ಯಶಸ್ವಿಯಾಗಿದ್ರು. ಆಗ ಮನೆಯ ಸಿಬ್ಬಂದಿ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ದಾಳಿಕೋರನನ್ನು ಕೋಣೆಯಲ್ಲಿ ಲಾಕ್ ಮಾಡಿದ್ದಾರೆ.
ಆರೋಪಿಯು 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಎಂದು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj