ಸಜೀವ ದಹನವಾದ ಅಗ್ನಿಶಾಮಕ ದಳ ಸಿಬ್ಬಂದಿ, ಓರ್ವ ಪೊಲೀಸ್ | ಒಟ್ಟು 7 ಜನ ಸಜೀವ ದಹನ - Mahanayaka
3:05 PM Thursday 12 - December 2024

ಸಜೀವ ದಹನವಾದ ಅಗ್ನಿಶಾಮಕ ದಳ ಸಿಬ್ಬಂದಿ, ಓರ್ವ ಪೊಲೀಸ್ | ಒಟ್ಟು 7 ಜನ ಸಜೀವ ದಹನ

09/03/2021

ಕೋಲ್ಕತ್ತಾ: ಭೀಕರ ಅಗ್ನಿ ಅವಘಡವೊಂದರಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ಸೇರಿದಂತೆ 9 ಮಂದಿ ಸಜೀವವಾಗಿ ದಹನವಾದ ಘಟನೆ ಕೋಲ್ಕತ್ತಾದ ಸ್ಟ್ರಾಂಡ್ ರಸ್ತೆ ಬಳಿಯ ಕಟ್ಟಡವೊಂದರಲ್ಲಿ ನಡೆದಿದೆ.

ನಾಲ್ವರು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಓರ್ವಪೊಲೀಸ್ ಅಧಿಕಾರಿ, ರೈಲ್ವೆ ಅಧಿಕಾರಿ ಹಾಗೂ ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಈಗಾಗಲೇ 7 ಮಂದಿಯ ಪೈಕಿ 5 ಮಂದಿಯ ಮೃತದೇಹ 12ನೇ ಮಹಡಿಯ  ಲಿಫ್ಟ್ ನಲ್ಲಿ ಪತ್ತೆಯಾಗಿದೆ.  ಲಿಫ್ಟ್ ಒಳಗೆ ಇರುವಾಗಲೇ ಉಸಿರುಗಟ್ಟಿ ಹಾಗೂ ಸುಟ್ಟು ಇವರು ಮೃತಪಟ್ಟಿದ್ದಾರೆ  ಎಂದು ಹೇಳಲಾಗಿದೆ.

ಇನ್ನೂ ಘಟನಾ ಸ್ಥಳಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾತ್ರಿ ಸುಮಾರು 11 ಗಂಟೆಗೆ ಬೇಟಿ ನೀಡಿದರು.  ಬೆಂಕಿ ತಗಲಿದ ಮಾಹಿತಿ ತಿಳಿದ ತಕ್ಷಣವೇ ಹಲವು ಸಚಿವರು ಹಾಗೂ ಅಧಿಕಾರಿಗಳು ಈ ಪ್ರದೇಶಕ್ಕೆ ಆಗಮಿಸಿದ್ದಾರೆ.

7 ಮಂದಿ ಈಗಾಗಲೇ ಸಾವಿಗೀಡಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಈ ಘಟನೆ ಸಂಬಂಧ ಪೊಲೀಸ್ ಆಯುಕ್ತರು ಹೇಳಿದ್ದಾರೆ. ಬೆಂಕಿ ಆಕಸ್ಮಿಕ ಸಂದರ್ಭದಲ್ಲಿ ಲಿಫ್ಟ್ ಬಳಸಿರುವುದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಇನ್ನೂ ಮೃತರ ಕುಟುಂಬಕ್ಕೆ ಮಮತಾ ಬ್ಯಾನರ್ಜಿ  10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದ ಹೇಳಿದ್ದಾರೆ.  ಇನ್ನೂ ಇದು ರೈಲ್ವೆ ಇಲಾಖೆಯ ಆಸ್ತಿಯಾಗಿದ್ದು, ಈ ಘಟನೆಗೆ ರೈಲ್ವೆ ಇಲಾಖೆಯೇ ಹೊಣೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ