ಮಾರ್ಜಲಕ್ಕೆ ವಿಶೇಷ ಆಹಾರ- ಬಟ್ಟೆ… ಸಾಕುಬೆಕ್ಕಿಗೆ ಸೀಮಂತ ಮಾಡಿದ ದಂಪತಿ
ಚಾಮರಾಜನಗರ: ಬೆಕ್ಕು ಎಂದರೆ ಯಾರಿಗೆ ಇಷ್ಟ ಇಲ್ಲಾ ಹೇಳಿ. ಅದರ ತುಂಟಾಟ, ಮನುಷ್ಯರೊಟ್ಟಿಗೆ ಒಗ್ಗುವ ಪರಿಯೇ ಒಂದು ವಿನೋಧ. ಆದರೆ, ಇಲ್ಲೊಂದು ಬೆಕ್ಕು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು ಮನೆಯ ಮಗಳಾಗಿ ಬದಲಾಗಿದೆ.
ಹೌದು..,, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿಯಲ್ಲಿ ಶಿಕ್ಷಕರಾಗಿರುವ ವೆಂಕಟರಮಣಶೆಟ್ಟಿ ಹಾಗೂ ಇವರ ಪತ್ನಿ ನಿರ್ಮಲಾ ಅವರಿಗೆ ಬೆಕ್ಕುಗಳೆಂದರೇ ಬಲು ಅಕ್ಕರೆ ಅಷ್ಟೇ ಅಲ್ಲ, ಮನೆಯ ಸದಸ್ಯನ ಸ್ಥಾನವನ್ನು ಕೊಟ್ಟಿದ್ದಾರೆ. ಅದರಂತೆ, ಮಗು ಹೆರಲು ಸಿದ್ಧಳಾದ ಸುಬ್ಬಿಗೆ ಸೀಮಂತ ಶಾಸ್ತ್ರ ಮಾಡಿ ಗಮನ ಸೆಳೆದಿದ್ದಾರೆ.
ವೆಂಕಟರಮಣ ಹಾಗೂ ನಿರ್ಮಲಾ ಅವರಿಗೆ ಇಬ್ಬರು ಪುತ್ರರಿದ್ದು ಮಗಳಿಲ್ಲ ಎಂಬ ಕೊರಗನ್ನು ಈ ಬೆಕ್ಕು ನಿವಾಸಿರಿದೆಯಂತೆ. ಆದ್ದರಿಂದಲೇ , ಬೆಕ್ಕು ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಅದಕ್ಕಿಷ್ಟವಾದ ಆಹಾರ, ತಿನಿಸು ಕೊಟ್ಟು ವಿಶೇಷ ಆರೈಕೆ ಮಾಡುತ್ತಿದ್ದಾರೆ.
ಹೆಣ್ಣು ಮಕ್ಕಳಿಲ್ಲದ ಕಾರಣ ಪ್ರೀತಿಯಿಂದ ಹೆಣ್ಣು ಬೆಕ್ಕನ್ನು ಸಾಕಿ ಅದಕ್ಕೆ ಪ್ರೀತಿಯಿಂದ ಸುಬ್ಬಿ ಎಂದು ಹೆಸರಿಡಲಾಗಿದೆ, ಪ್ರತಿನಿತ್ಯ ಅದಕ್ಕೆ ಇಷ್ಟವಾದ ತಿನಿಸನ್ನು ಕೊಟ್ಟು_ಸ್ನಾನ ಮಾಡಿಸಿ ಅಗತ್ಯ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಕ್ಕಳಿಗೆ ಸೀಮಂತ ಮಾಡುವ ಹಾಗೆ ಫಲ ತಾಂಬೂಲ, ತಿನಿಸುಗಳನ್ನು ಇಟ್ಟು ಹೊಸ ಬಟ್ಟೆ ತೊಡಿಸಿ ಸಂಪ್ರದಾಯದಂತೆ ಶಾಸ್ತ್ರ ಮಾಡಿ ಆರತಿ ಬೆಳಗಿ ಶುಭ ಹಾರೈಸಿದ್ದೆವೆ ಎಂದು ಶಿಕ್ಷಕ ವೆಂಕಟರಮಣ ಶೆಟ್ಟಿ ತಿಳಿಸಿದರು.
ವೇಗದ ಬದುಕಿನಲ್ಲಿ ಪ್ರಾಣಿಗಳನ್ನು ಸಾಕಿ-ಸಲುಹುವುದೇ ಬೇಡ ಎಂಬವರ ನಡುವೆ ಬೆಕ್ಕಿಗೆ ಮಗಳ ಸ್ಥಾನ ಕೊಟ್ಟು ಸೀಮಂತ ಮಾಡಿರುವುದು ವಿಶೇಷ ಹಾಗೂ ಮಾದರಿ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka