ಸಾಕುನಾಯಿಗಳ ಮೇಲೆ ಚಿರತೆ ದಾಳಿ: ಚಿರತೆಗೆ ಆಹಾರವಾದ ಹಲವು ನಾಯಿಗಳು!
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಲಾಯಿಲ ಗ್ರಾಮದ ಲಾಯಿಲಬೈಲು ಎಂಬಲ್ಲಿ ಸಾಕು ನಾಯಿಗಳನ್ನು ಚಿರತೆ ದಾಳಿ ನಡೆಸಿ ಕೊಂಡೊಯ್ದಿರುವ ಘಟನೆ ನಡೆದಿದೆ.
ಕಳೆದ ಎರಡು ವಾರಗಳಿಂದ ಚಿರತೆ ಕಾಟ ಹೆಚ್ಚಿದೆ ಎಂದು ನಾಗರಿಕರು ಮಾಹಿತಿ ನೀಡಿದ್ದಾರೆ. ವಾರಗಳ ಹಿಂದೆ ಗಾಣದಕೊಟ್ಯ ಎಂಬಲ್ಲಿಂದ ಕಟ್ಟಿ ಹಾಕಿದ ನಾಯಿಯೊಂದನ್ನು , ದಡ್ಡು ಲಿಂಬಯ್ಯ ದೇವಾಡಿಗ ಎಂಬವರ ಎರಡು ನಾಯಿಗಳನ್ನು , ಸೋಮವಾರ ರಾತ್ರಿ ಲಾಯಿಲಬೈಲು ಇನಾಸ ಎಂಬವರ ಸಾಕು ನಾಯಿಯನ್ನು ದಾಳಿ ನಡೆಸಿ ಕೊಂಡೊಯ್ದಿದೆ.
ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಬುಧವಾರ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆ ಹಿಡಿಯುವ ಕಾರ್ಯಚರಣೆ ನಡೆಸಲಿದ್ದಾರೆ ಎಂದು ಲಾಯಿಲ ಉಪ ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka