ಸಾಲ ಬಾಧೆಯಿಂದ ಬೇಸೆತ್ತು ದಂಪತಿ ಆತ್ಮಹತ್ಯೆಗೆ ಶರಣು - Mahanayaka
3:18 PM Thursday 12 - December 2024

ಸಾಲ ಬಾಧೆಯಿಂದ ಬೇಸೆತ್ತು ದಂಪತಿ ಆತ್ಮಹತ್ಯೆಗೆ ಶರಣು

dampathi
27/01/2022

ಮೈಸೂರು: ಸಾಲದ ಬಾಧೆಯಿಂದ ಬೇಸೆತ್ತು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಉದಯಗಿರಿಯ ಸಾತಗಳ್ಳಿ ಲೇಔಟ್ ​ನಲ್ಲಿ ನಡೆದಿದೆ.

ಸಂತೋಷ್ (26) ಮತ್ತು ಭವ್ಯಾ (22 ) ಆತ್ಮಹತ್ಯೆ ಮಆಡಿಕೊಂಡಿರುವ ದಂಪತಿ. ಇವರು ಊಟದಲ್ಲಿ ವಿಷ ಬೆರೆಸಿಕೊಂಡು ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದು ಕುಟುಂಬಸ್ಥರಿಗೆ ತಿಳಿದು ಕೂಡಲೇ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.

ಮದುವೆಯಾಗಿ ಕೇವಲ ಎರಡು ವರ್ಷ ಕಳೆದಿತ್ತು. ಕಳೆದ ಕೆಲ ದಿನಗಳಿಂದ ದಂಪತಿ ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದರು. ಹೀಗಾಗಿ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಉದಯಗಿರಿ ಠಾಣಾ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಂಸಾರೂಪಕ್ಕೆ ತಿರುಗಿದ ರೈಲ್ವೆ ಅಭ್ಯರ್ಥಿಗಳ ಪ್ರತಿಭಟನೆ: ಪರೀಕ್ಷೆ ಮುಂದೂಡಿಕೆ

ಡ್ರಗ್​​ ದಂಧೆ ಪ್ರಕರಣ: ಮಹಿಳೆ ಸೇರಿ ಮತ್ತೆ ಮೂವರ ಸೆರೆ

ಮೊಸರಿನ ಜೊತೆ ಒಣದ್ರಾಕ್ಷಿ ಸೇವಿಸಿದರೆ ಏನಾಗುತ್ತೆ ಗೊತ್ತಾ?

ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿರುವ ಜಡ್ಜ್ ವಜಾಕ್ಕೆ ಶಾಸಕ ಕೆ.ಶಿವನಗೌಡ ಒತ್ತಾಯ

ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾ ಮಹಿಳೆಯ ಬಂಧನ​​

 

ಇತ್ತೀಚಿನ ಸುದ್ದಿ