ಸಾಲಭಾದೆ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು

suicide
11/02/2022

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಕಣಗಲು ಗ್ರಾಮದಲ್ಲಿ ಸಾಲಭಾದೆ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜಯಣ್ಣೇ ಗೌಡ (45) ಮೃತ ರೈತ. 4.39 ಎಕರೆ ಜಮೀನು ಹೊಂದಿದ್ದ ಜಯಣ್ಣೇ ಗೌಡ, ಜಮೀನಿನಲ್ಲಿ ತಂಬಾಕು, ಮುಸುಕಿನ ಜೋಳ, ರಾಗಿ ಬೆಳೆದಿದ್ದರು. ಈ ಬೆಳೆ ಬೆಳೆಯಲು ಬ್ಯಾಂಕ್‌ನಲ್ಲಿ 5 ಲಕ್ಷ ರೂ., ಸಂಘ-ಸಂಸ್ಥೆಗಳಲ್ಲಿ 6 ಲಕ್ಷ ರೂ. ಸೇರಿದಂತೆ ಸ್ವಲ್ಪ ಕೈಸಾಲ ಕೂಡ ಮಾಡಿಕೊಂಡಿದ್ದರು.

ಬೆಳೆ ನಷ್ಟದಿಂದ ಸಾಲ ತೀರಿಸಲಾಗದೆ ಕಳೆದ 10 ದಿನಗಳ ಹಿಂದೆ ವಿಷ ಸೇವಿಸಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಬ್ ಇನ್ಸ್ ಪೆಕ್ಟರ್ ನ ಕಾರಿನ ಗಾಜು ಒಡೆದು, ಹಣ ಲ್ಯಾಪ್ ಟಾಪ್ ದೋಚಿದ ಕಳ್ಳ!

ಬಾವಿಯಲ್ಲಿ ಪಿಯುಸಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ

ಸಮವಸ್ತ್ರ ವಿವಾದ: ಹೈಕೋರ್ಟ್ ನಿಂದ ಮಧ್ಯಂತರ ಆದೇಶ

ಜನಪದ ಕಲಾವಿದ ಮಹಾದೇವ ವೇಳಿಪ ನಿಧನ

ಭೀಕರ ಅಪಘಾತ: ಮಾಜಿ ಶಾಸಕ ಎಸ್.ಬಾಲರಾಜು ಸೇರಿ ಮೂವರಿಗೆ ಗಾಯ

ಇತ್ತೀಚಿನ ಸುದ್ದಿ

Exit mobile version