ಪಾನ್ ಮಸಾಲ ಸಾಲ ನೀಡಲಿಲ್ಲ ಎಂದು ಅಂಗಡಿ ಮಾಲಿಕನ ಮಗನನ್ನು ಗುಂಡು ಹಾರಿಸಿ ಹತ್ಯೆ - Mahanayaka
9:27 PM Thursday 12 - December 2024

ಪಾನ್ ಮಸಾಲ ಸಾಲ ನೀಡಲಿಲ್ಲ ಎಂದು ಅಂಗಡಿ ಮಾಲಿಕನ ಮಗನನ್ನು ಗುಂಡು ಹಾರಿಸಿ ಹತ್ಯೆ

17/02/2021

ಪಾಟ್ನಾ: ಪಾನ್ ಮಸಾಲ ಸಾಲ ನೀಡಲಿಲ್ಲ ಎಂದು ಅಂಗಡಿ ಮಾಲಿಕನ ಮಗನನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ನಡೆದಿದ್ದು, ಕೇವಲ 2 ರೂ ಬೆಲೆಯ  ಪಾನ್ ಮಸಾಲಕ್ಕಾಗಿ ವ್ಯಕ್ತಿಯ ಪ್ರಾಣವನ್ನೇ ತೆಗೆಯಲಾಗಿದೆ.

ತ್ರಿವೇಣಿ ಗಂಜ್ ನಲ್ಲಿ ಘಟನೆ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಆರೋಪಿ ಅಜಿತ್ ಕುಮಾರ್ ಎಂಬಾತ ಕಿರಾಣಿ ಅಂಗಡಿ ಮಾಲಕ ನ ಪುತ್ರ ಮಿಥಿಲೇಶ್ ನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ.

ತನಗೆ ಸಾಲ ನೀಡಿಲ್ಲ ಎಂದು ಆರೋಪಿ ಅಜಿತ್ ಭಾನುವಾರ ಮಿಥಿಲೇಶ್ ನ ತಂದೆಯೊಂದಿಗೆ ಜಗಳವಾಡಿದ್ದ.  ಮರುದಿನ ತನ್ನ ಸಹಚರರೊಂದಿಗೆ  ಅಜಿತ್ ಬಂದಿದ್ದು, ಈ ವೇಳೆ ಮಿಥಿಲೇಶ್ ಅಂಗಡಿಯಲ್ಲಿದ್ದು, ಆತ ಕೂಡ ಸಾಲ ನೀಡಲು ನಿರಾಕರಿಸಿದ್ದಾನೆ. ೀ ವೇಳೇ ಅಜಿತ್ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.

ಘಟನೆಯ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇತ್ತೀಚಿನ ಸುದ್ದಿ