ಸಾಲ ತೀರಿಸಲು ಸಿಎಂನ ಪ್ರತಿಮೆಯನ್ನೇ ಮಾರಾಟಕ್ಕಿಟ್ಟ ಅಭಿಮಾನಿ!
ತೆಲಂಗಾಣ: ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಅವರ ಅಭಿಮಾನಿಯೋರ್ವ ಅವರ, ಪ್ರತಿಮೆ ಇರುವ ದೇವಸ್ಥಾನವೊಂದನ್ನು ನಿರ್ಮಿಸಿದ್ದು, ಇದಕ್ಕಾಗಿ ಸಾಲ ಮಾಡಿದ್ದರು. ಆದರೆ, ಇದೀಗ ಸಾಲ ತೀರಿಸಲಾಗದೇ ಮುಖ್ಯಮಂತ್ರಿಯ ಪ್ರತಿಮೆಯನ್ನು ಅವರು ಮಾರಾಟಕ್ಕಿಟ್ಟ ಘಟನೆ ನಡೆದಿದೆ.
2016ರಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಅಭಿಮಾನಿ ಗುಂಡ ರವೀಂದರ್ ಎಂಬವರು ಕೆಸಿಆರ್ ಅವರ ಪ್ರತಿಮೆಯನ್ನು ಹೊಂದಿರುವ ದೇವಸ್ಥಾನ ನಿರ್ಮಿಸಿದ್ದರು. ಅಮೃತ ಶಿಲೆಯಲ್ಲಿ ಸಿಎಂ ಮೂರ್ತಿಯನ್ನು ನಿರ್ಮಿಸಲಾಗಿತ್ತು. ಜೊತೆಗೆ ಮಂಚೇರಿಯಲ್ ಜಿಲ್ಲೆಯ ದಾಂಡೇಪಲ್ಲಿ ಮಂಡಲದ ಪ್ರಧಾನ ಕಚೇರಿಯ ಅವರ ಮನೆ ಮುಂದೆ ಪ್ರತಿಮೆಯನ್ನು ಸ್ಥಾಪಿಸಿದ್ದರು.
ರವೀಂದರ್ ಮತ್ತು ಅವರ ಕುಟುಂಬ ಕೆಸಿಆರ್ ಅವರನ್ನು ದೇವರಂತೆ ಪೂಜಿಸುತ್ತಿದ್ದರು. ಆದರೆ, ಪಕ್ಷದಲ್ಲಿ ರವೀಂದರ್ ಗೆ ಸಿಎಂ ಯಾವುದೇ ಮನ್ನಣೆಯನ್ನು ನೀಡದಿದ್ದಾಗ ಇದೀಗ ಪ್ರತಿಮೆಯನ್ನು ಗೋಣಿ ಚೀಲದಲ್ಲಿ ಮುಚ್ಚಿದ್ದಾರೆ. ಜೊತೆಗೆ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣ ನೀಡಿ ಪ್ರತಿಮೆಯನ್ನು ಮಾರಾಟ ಮಾಡುವುದಾಗಿ ಘೋಷಿಸಿದ್ದಾರೆ.
ಚಂದ್ರಶೇಖರ್ ಅವರಾಗಲಿ ಅವರ ಪುತ್ರನಾಗಲೀ ಅವರನ್ನು ನನಗೆ ಭೇಟಿಯಾಗುವ ಅವಕಾಶ ಕೂಡ ಸಿಗಲಿಲ್ಲ. ಅವರ ಧೋರಣೆಯ ಬಗ್ಗೆ ನಾನು ಬೇಸತ್ತು ಹೋಗಿದ್ದೇನೆ. ನನಗೆ ಇದ್ದ ಏಕೈಕ ಆದಾಯದ ಮೂಲವಾದ ಕೇಬಲ್ ಟಿವಿ ನೆಟ್ ವರ್ಕ್ ನ್ನು ಕೂಡ ತಾನು ಕಳೆದುಕೊಂಡೆ ಹಾಗಾಗಿ ಇದೀಗ ಮೂರ್ತಿ ಮಾರಾಟಕ್ಕೆ ಮುಂದಾಗಿರುವುದಾಗಿ ಅವರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on
ಇನ್ನಷ್ಟು ಸುದ್ದಿಗಳು…
ತರಗತಿ ಕೋಣೆಯಲ್ಲಿಯೇ ಮಹಿಳೆಯೊಂದಿಗೆ ಅಸಹ್ಯವಾಗಿ ನಡೆದುಕೊಂಡ ಮುಖ್ಯ ಶಿಕ್ಷಕ | ವಿಡಿಯೋ ವೈರಲ್
ಗೋಬಿ ಮಂಚೂರಿ, ಎಗ್ ರೈಸ್ ಕೊಡಿಸುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ!
ಮದುವೆಯಾದ ಕೆಲವೇ ಹೊತ್ತಿನಲ್ಲಿ ಪ್ರೇಮಿಯೊಂದಿಗೆ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಪೋಷಕರು!
ಮೊಬೈಲ್ ಚಾರ್ಜ್ ಇಡುವ ವೇಳೆ ವಿದ್ಯುತ್ ಶಾಕ್ ತಗಲಿ ಒಂದೇ ಕುಟುಂಬದ ಮೂವರ ದಾರುಣ ಸಾವು
6 ಜನರು ಪ್ರಯಾಣಿಸುತ್ತಿದ್ದ ರಷ್ಯಾದ ಮಿಲಿಟರಿ ವಿಮಾನ ಏಕಾಏಕಿ ಕಣ್ಮರೆ!
ಕೊನೆಗೂ ಕೋರ್ಟ್ ನಲ್ಲಿ ಹೇಳಿಕೆ ದಾಖಲಿಸಿದ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ