ಕೃಷಿ ಸಾಲ ತೀರಿಸಲಾಗದೇ ಸಾವಿನ ಮೊರೆ ಹೋದ ರೈತ
ಅಮಾಸ್ಸೆಬೈಲು: ಕೃಷಿ ಸಾಲ ತೀರಿಸಲಾಗದೆ ರೈತರೊಬ್ಬರು ಸಾವಿಗೆ ಶರಣಾದ ಘಟನೆ ಫೆ.24ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಮಚ್ಚಟ್ಟು ಗ್ರಾಮದ ಹೊನದನೆ ಮನೆಜೆಡ್ಡು ಎಂಬಲ್ಲಿ ನಡೆದಿದೆ.
ಮನೆಜೆಡ್ಡು ನಿವಾಸಿ ರಾಜೇಶ್ ಮೃತ ರೈತ. ಇವರು ಹಂಚಿಕಟ್ಟೆ ಅಂಚೆ ಕಚೇರಿಯಲ್ಲಿ ತಾತ್ಕಾಲಿಕ ಪೋಸ್ಟ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು, ಕೃಷಿ ಕೆಲಸದ ಬಗ್ಗೆ ಸಾಲ ಮಾಡಿಕೊಂಡಿದ್ದರು.
ಸಾಲ ತೀರಿಸಲಾಗದೆ ಮನನೊಂದ ಅವರು, ಮನೆಯ ಎದುರಿನ ದನದ ಕೊಟ್ಟಿಗೆಯ ಪಕ್ಕಾಸಿಗೆ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw