ಬಜೆಟ್ ನಲ್ಲಿ ವೇತನ ಪರಿಷ್ಕರಣೆ, ಎನ್. ಪಿ. ಎಸ್. ರದ್ದತಿ: ಸರ್ಕಾರದ ಕ್ರಮ ವಿರೋಧಿಸಿ, ನೌಕರರ ತುರ್ತು ಸಭೆ
ಬಜೆಟ್ ನಲ್ಲಿ ವೇತನ ಪರಿಷ್ಕರಣೆ ಹಾಗೂ ಎನ್. ಪಿ. ಎಸ್. ರದ್ದತಿ ಕುರಿತಂತೆ ಸರ್ಕಾರದ ಕ್ರಮ ವಿರೋಧಿಸಿ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಇಂದು ತುರ್ತು ಸಭೆ ನಡೆಯಿತು.
ಬಜೆಟ್ ನಲ್ಲಿ ವೇತನ ಪರಿಷ್ಕರಣೆ ಕುರಿತಂತೆ ರಾಜ್ಯದ ಎಲ್ಲಾ ನೌಕರರು ಇಟ್ಟುಕೊಂಡಿದ್ದ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಹುಸಿಗೊಳಿಸಿದ್ದು, ಇದರಿಂದ ನೌಕರರಲ್ಲಿ ತೀವ್ರ ಅಸಮಧಾನ ಉಂಟಾಗಿದ್ದು, ಈ ಬಗ್ಗೆ ನಡೆಸಬೇಕಾಗಿರುವ ಮುಂದಿನ ಹೋರಾಟದಲ್ಲಿ ಎಲ್ಲಾ ನೌಕರರು ಸಕ್ರಿಯವಾಗಿ ತೊಡಗಿಸಿಕೊಂಡು, ವೇತನ ಆಯೋಗದ ಸೌಲಭ್ಯಗಳನ್ನು ಪಡೆಯುವವರೆಗೂ ವಿರಮಿಸದಂತೆ ಅಂಪಾರು ದಿನಕರ ಶೆಟ್ಟಿ ಹೇಳಿದರು.
ಸಭೆಯಲ್ಲಿ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಖಜಾಂಚಿ ಶರೀಫ್ ರೋಣ, ಪ್ರೌಡಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ನೌಕರರ ಸಂಘದ ಮಾಜಿ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಪ್ರತಿನಿಧಿ ಗಳು , ವೃಂದ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw