ಶಾಲಾ ಬಾಲಕಿಗೆ ಆನ್‍ಲೈನ್ ನಲ್ಲಿ ಲೈಂಗಿಕ ಕಿರುಕುಳ: ಆರೋಪಿಯ ಬಂಧನ
ತಿರುವನಂತಪುರಂ: ಆನ್‍ಲೈನ್ ನಲ್ಲಿ ಅಪ್ರಾಪ್ತ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಾ ಬೆದರಿಕೆ ಹಾಕುತ್ತಿದ್ದ 23 ವರ್ಷದ ಯುವಕನನ್ನು ಕೇರಳ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬಿನು ಎಂದು ಗುರುತಿಸಲಾಗಿದ್ದು, ಈತ ದಿನಗೂಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಬಾಲಕಿಯೊಂದಿಗೆ ಸ್ನೇಹ ಬೆಳಸಿ ಫೋಟೋ ಕಳುಹಿಸುವಂತೆ ಕೇಳಿಕೊಳ್ಳುತ್ತಿದ್ದ. ನಂತರ ಆ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದನು. ಒಂದು ವೇಳೆ ಬಾಲಕಿ ನಗ್ನ ಚಿತ್ರಗಳನ್ನು ಕಳುಹಿಸದಿದ್ದಲ್ಲಿ ಆಕೆಯ ಮಾರ್ಫ್ ಮಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಹೇಳುತ್ತಿದ್ದ. ಈ ವಿಚಾರವನ್ನು ಬಾಲಕಿ ತನ್ನ ಮನೆಯವರ ಬಳಿ ಹೇಳಿಕೊಂಡಿದ್ದು, ಆಕೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಾಲಕಿ ಬಳಿ ಆರೋಪಿಯ ಫೇಸ್‍ಬುಕ್ ಐಡಿ ಇದ್ದಿದ್ದರಿಂದ ಐಡಿಗೆ ಲಿಂಕ್ ಮಾಡಲಾದ ಫೋನ್ ನಂಬರನ್ನು ಪೊಲೀಸರು ಪಡೆದು, ನಂಬರ್ ಅನ್ನು ಪರಿಶೀಲಿಸಿದಾಗಿ ಸಿಮ್ ಕಾರ್ಡ್ ಮಹಿಳೆಯ ಹೆಸರಿನಲ್ಲಿತ್ತು. ಅದು ಆರೋಪಿಯ ತಾಯಿಯ ಹೆಸರಿನಲ್ಲಿದೆ ಎಂಬ ಸತ್ಯ ಪೊಲೀಸರಿಗೆ ತಿಳಿದು ಬಂದಿದೆ.
ಮೂರು ತಿಂಗಳ ತನಿಖೆಯ ನಂತರ ಕೊಲ್ಲಂ ಗ್ರಾಮಾಂತರ ಸೈಬರ್ ಕ್ರೈಂ ಪೊಲೀಸರ ತಂಡ ವರ್ಕಳದಿಂದ ಬಿನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬಿಎಸ್ ಪಿ ವರಿಷ್ಠೆ ಮಾಯಾವತಿಯಿಂದ ಪಂಜಾಬ್ ನಲ್ಲಿ ಚುನಾವಣಾ ರ‍್ಯಾಲಿ
ಪೈಪ್ ಲೈನ್ ಕಾಮಗಾರಿಗೆಂದು ಅಗೆದಿದ್ದ ಗುಂಡಿಯೊಳಗೆ ಬಿದ್ದು ಬಾಲಕಿ ಸಾವು
ಮಹಾಭಾರತ ಧಾರಾವಾಹಿಯ ‘ಭೀಮ’ ಪ್ರವೀಣ್ ಕುಮಾರ್ ಸೋಬ್ತಿ ನಿಧನ
ಐದು ವರ್ಷದ ಬಾಲಕಿಯನ್ನು ತುಳಿದು ಕೊಂದ ಕಾಡಾನೆ
ಮೃತ ಗುಬ್ಬಚ್ಚಿಗೆ ತಿಥಿ ಮಾಡಿ, ಶ್ರದ್ಧಾಂಜಲಿ ಸಲ್ಲಿಸಿದ ಗ್ರಾಮಸ್ಥರು