ನೈತಿಕ ಶಿಕ್ಷಣ ಜಾರಿ: ಶಾಲಾ ಪಠ್ಯ ಕ್ರಮದಲ್ಲಿ ಕುರಾನ್ ಸೇರ್ಪಡೆ: ಬಿ.ಸಿ.ನಾಗೇಶ್ - Mahanayaka
5:26 PM Wednesday 5 - February 2025

ನೈತಿಕ ಶಿಕ್ಷಣ ಜಾರಿ: ಶಾಲಾ ಪಠ್ಯ ಕ್ರಮದಲ್ಲಿ ಕುರಾನ್ ಸೇರ್ಪಡೆ: ಬಿ.ಸಿ.ನಾಗೇಶ್

b c nagesh
20/04/2022

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಪುಸ್ತಕದಲ್ಲಿ ನೈತಿಕ ಶಿಕ್ಷಣವನ್ನು ಸೇರಿಸಲಾಗುವುದು. ಅದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗುವುದಿಲ್ಲ. ಎಲ್ಲಾ ಧರ್ಮಗಳ ನೈತಿಕ ಮೌಲ್ಯಗಳನ್ನು ಕಲಿಸುವ ಪಠ್ಯಗಳನ್ನು ಸೇರಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

 ಪಂಚತಂತ್ರ, ರಾಮಾಯಣ, ಮಹಾಭಾರತ, ಭಗವದ್ಗೀತೆ, ಕುರಾನ್ ಮತ್ತು ಇತರ ನೈತಿಕ ಶಿಕ್ಷಣಗಳನ್ನು ಕೂಡ ಸೇರಿಸಲಾಗುವುದು. ಸಮಿತಿಯೊಂದು ಪಠ್ಯಕ್ರಮವನ್ನು ನಿರ್ಧರಿಸಲಿದ್ದು ಈ ನೈತಿಕ ಶಿಕ್ಷಣದ ಪಠ್ಯಕ್ಕೆ ಪರೀಕ್ಷೆಯಿರುವುದಿಲ್ಲ ಎಂದು ಸಚಿವರು ವಿವರಿಸಿದರು.

ಮದ್ರಸಗಳಿಂದ ಅಥವಾ ಅಲ್ಪಸಂಖ್ಯಾತ ಸಮುದಾಯ ಮುಖಂಡರಿಂದ ನಮಗೆ ಬೇಡಿಕೆ ಬರದಿದ್ದರೂ ಕೂಡ ನಿಗದಿತ ಶಿಕ್ಷಣ ಮಕ್ಕಳಿಗೆ ಕೊಡಿಸಿ ಎಂದು ಪೋಷಕರಿಂದ ಬೇಡಿಕೆ ಬಂದಿದೆ. ಈ ಮೂಲಕ ಅಲ್ಪಸಂಖ್ಯಾತ ಸಮುದಾಯ ಮಕ್ಕಳು ಕೂಡ ಬೇರೆ ಮಕ್ಕಳಂತೆ ಶಾಲೆಗಳಲ್ಲಿ ಪಡೆಯುವ ನಿಗದಿತ ಶಿಕ್ಷಣವನ್ನು ಗಳಿಸಿ ಪೈಪೋಟಿ ಒಡ್ಡಲು, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ವೃತ್ತಿಪರ ಕೋರ್ಸ್ ಗಳಿಸಲು ಸಹಾಯವಾಗುತ್ತದೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸರ್ಕಾರದ ಮೇಲೆ ಕಮಿಷನ್ ಆರೋಪ ಸತ್ಯಕ್ಕೆ ದೂರವಾದದ್ದು | ನಿರಂಜನಾನಂದಪುರಿ ಸ್ವಾಮೀಜಿ

ಕೋಟಿ ಸಂಭಾವನೆ ಕೊಟ್ಟರೂ ತಂಬಾಕು ಜಾಹೀರಾತಿನಲ್ಲಿ ನಟಿಸಲ್ಲ ಎಂದ ಅಲ್ಲು ಅರ್ಜುನ್

ನಟ ಶಿವರಾಜ್ ಕುಮಾರ್ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ: ಅಷ್ಟಕ್ಕೂ ನಡೆದದ್ದೇನು?

ಯಡಿಯೂರಪ್ಪರಿಂದ ಬೆಳೆದ ಯತ್ನಾಳ್, ಅವರ ವಿರುದ್ಧವೇ ಕತ್ತಿಮಸೆಯುತ್ತಿದ್ದಾರೆ: ದಿಂಗಾಲೇಶ್ವರ ಶ್ರೀ ತಿರುಗೇಟು

ಬಸ್ಸಿನ ಕಿಟಕಿ ತೆರೆಯುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಚಾಲಕನ ಬಂಧನ

ಇತ್ತೀಚಿನ ಸುದ್ದಿ