ಶಾಲೆಗಳಿಗೆ ರಜೆ, ಪೆಟ್ರೋಲ್ ಗಾಗಿ ಕಾದು ಕುಳಿತ ಜನರು: ಶ್ರೀಲಂಕಾದ ದುಸ್ಥಿತಿ!
ಶ್ರೀಲಂಕಾ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗಿ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ದೇಶವು ಹಲವಾರು ಕ್ರಮಗಳನ್ನು ತೆಗೆದುಕೊಂಡರು ಪರಿಸ್ಥಿತಿ ಮಾತ್ರ ಇನ್ನೂ ಹತೋಟಿಗೆ ಬಂದಿಲ್ಲ.
ದೇಶದಲ್ಲಿ ಪೆಟ್ರೋಲ್ ಗಾಗಿ ಸಾಲುಗಟ್ಟಿ ನಿಂತವರಿಗೆ ಟೋಕನ್ ನೀಡಲಾಗಿದೆ. ಶಾಲೆಗಳನ್ನು ಮುಚ್ಚಲಾಗಿದೆ. ಸರ್ಕಾರಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ಹೇಳಲಾಗುತ್ತಿದೆ.
ಶ್ರೀಲಂಕಾವು ಒಟ್ಟು 22 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಆಹಾರ, ಔಷಧ, ಇಂಧನ ಖರೀದಿಸಲು ಹಣದ ಮೊರೆ ಹೋಗುವ ಪರಿಸ್ಥಿತಿ ಬಂದಿದೆ. ಜನರು ಇಂಧನಕ್ಕಾಗಿ ಹಲವರು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ತಾನು ನಾಲ್ಕು ದಿನಗಳಿಂದ ಪೆಟ್ರೋಲ್ ಬಂಕ್ ಮುಂದೆ ಪೆಟ್ರೋಲ್ ಗಾಗಿ ಕಾಯುತ್ತಿರುವುದಾಗಿ ಆಟೋ ಚಾಲಕರೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಿದ್ದೆ ಬಿಟ್ಟು ಜನರು ಪೆಟ್ರೋಲ್ ಬಂಕ್ ಮುಂದೆ ಕಾಯುತ್ತಿರುವುದು ಕಂಡು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಆಲಿಯಾ ಭಟ್!
ಹೆಲ್ಮೆಟ್ ಧರಿಸಿದ್ದರಿಂದ ಯುವತಿಯ ಪ್ರಾಣ ಉಳಿಯಿತು!
ನಟಿಯ ಮೇಲೆ ಅತ್ಯಾಚಾರ ಆರೋಪ: ನಟ ವಿಜಯ್ ಬಾಬು ಆರೆಸ್ಟ್
ಕಾಂಗ್ರೆಸ್ ಗೆ ಮತ ನೀಡಿ ನಿಮ್ಮ ಮತ ವ್ಯರ್ಥ ಮಾಡಬೇಡಿ: ಅಸಾದುದ್ದೀನ್ ಓವೈಸಿ
ಟ್ರಕ್ ನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ 46 ಕಾರ್ಮಿಕರು!