ತೆರವು: ಸಾಹಿತಿ ಸಲ್ಮಾನ್ ರುಷ್ದಿಯ 'ದಿ ಸೆಟಾನಿಕ್ ವರ್ಸಸ್' ಪುಸ್ತಕದ ಮೇಲಿನ ನಿಷೇಧ ಅಂತ್ಯ - Mahanayaka

ತೆರವು: ಸಾಹಿತಿ ಸಲ್ಮಾನ್ ರುಷ್ದಿಯ ‘ದಿ ಸೆಟಾನಿಕ್ ವರ್ಸಸ್’ ಪುಸ್ತಕದ ಮೇಲಿನ ನಿಷೇಧ ಅಂತ್ಯ

08/11/2024

ಸಾಹಿತಿ ಸಲ್ಮಾನ್ ರುಷ್ದಿ ಅವರ ಬಹು ವಿವಾದಿತ ಕೃತಿಯಾದ ದಿ ಸೆಟಾನಿಕ್ ವರ್ಸಸ್ ಪುಸ್ತಕದ ಮೇಲಿನ ನಿಷೇಧ ತೆರವುಗೊಂಡಿದೆ. ಈ ಪುಸ್ತಕದಲ್ಲಿ ಧರ್ಮನಿಂದನೆಯನ್ನು ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ 1988ರಲ್ಲಿ ಈ ಪುಸ್ತಕಕ್ಕೆ ಭಾರತ ಸರ್ಕಾರ ನಿಷೇಧವನ್ನು ಹೇರಿತ್ತು. ಆದರೆ ಈ ನಿಷೇಧವನ್ನು ತೆರವುಗೊಳಿಸುವಂತೆ 2019ರಲ್ಲಿ ದೆಹಲಿ ಹೈಕೋರ್ಟಿನಲ್ಲಿ ದೂರು ಸಲ್ಲಿಸಲಾಗಿತ್ತು.


Provided by

ಈ ಪುಸ್ತಕವನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಲಾದ ಬಗ್ಗೆ ಸರ್ಕಾರದ ಸುತ್ತೋಲೆಯನ್ನು ಹಾಜರುಪಡಿಸುವಂತೆ ದೆಹಲಿ ಹೈಕೋರ್ಟುಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಅಂಥದ್ದೊಂದು ಸುತ್ತೋಲೆ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಆ ಕಾರಣದಿಂದಾಗಿ ಈ ಪುಸ್ತಕವನ್ನು ಭಾರತಕ್ಕೆ ತರಿಸಿಕೊಳ್ಳುವ ಬಗ್ಗೆ ಇರುವ ನಿಷೇಧ ಸಹಜವಾಗಿಯೇ ಕೊನೆಗೊಂಡಿದೆ ಎಂದು ನ್ಯಾಯಾಲಯ ತಿಳಿಸಿದೆ.

ರುಷ್ದಿ ಅವರ ಈ ನಾಲ್ಕನೇ ಕಾದಂಬರಿಯ ವಿರುದ್ಧ ಜಾಗತಿಕವಾಗಿಯೇ ವಿರೋಧ ವ್ಯಕ್ತವಾಗಿತ್ತು. ಪ್ರವಾದಿ ಮುಹಮ್ಮದರನ್ನು ಈ ಕೃತಿಯಲ್ಲಿ ನಿಂದಿಸಲಾಗಿದೆ ಎಂದು ಮುಸ್ಲಿಂ ಸಮುದಾಯ ಆಕ್ರೋಶವನ್ನು ವ್ಯಕ್ತಪಡಿಸಿತ್ತು. 1988 ಸೆಪ್ಟೆಂಬರ್ ನಲ್ಲಿ ಈ ಪುಸ್ತಕ ಬಿಡುಗಡೆಯಾದಾಗ ಭಾರತದಲ್ಲೂ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

 

ಇತ್ತೀಚಿನ ಸುದ್ದಿ