ಸಮಾಜವಾದಿ ವ್ಯವಸ್ಥೆಯ ಹರಿಕಾರ ಲೆನಿನ್ : ಮನೋಜ್ ವಾಮಂಜೂರು
ಮಂಗಳೂರು: ಮಾರ್ಕ್ಸ್‌ವಾದಿ ಸಿದ್ದಾಂತವನ್ನು ಅಳವಡಿಸಿ ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ಕ್ರಾಂತಿ ನಡೆಸಿ ಸೋವಿಯತ್ ಒಕ್ಕೂಟವನ್ನು ರಚಿಸಿ ಬಂಡವಾಳಶಾಹಿ ವ್ಯವಸ್ಥೆಗೆ ಎದುರಾಗಿ ಸಮಾಜವಾದಿ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ದುಡಿಯುವ ವರ್ಗದ ಸರಕಾರವನ್ನು ರಚಿಸಿದ ಲೆನಿನ್, ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ನಡೆದ ವಿಮೋಚನಾ ಹೋರಾಟಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದರು. ಆ ಮೂಲಕ ಸಮಾಜವಾದಿ ವ್ಯವಸ್ಥೆಯ ಹರಿಕಾರರಾಗಿ ಮೂಡಿ ಬಂದಿದ್ದರು ಎಂದು DYFI ಜಿಲ್ಲಾ ನಾಯಕರೂ, ಯುವ ವಕೀಲರಾದ ಮನೋಜ್ ವಾಮಂಜೂರುರವರು ಅಭಿಪ್ರಾಯ ಪಟ್ಟರು.
ಜಾಗತಿಕ ಕಮ್ಯುನಿಸ್ಟ್ ಚಳುವಳಿಯ ನಾಯಕ ಲೆನಿನ್ ರವರ 98ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಮಂಗಳೂರಿನ ವಿಕಾಸ ಕಚೇರಿಯಲ್ಲಿ ಜರುಗಿದ ಸಮಾಜವಾದಿ ವ್ಯವಸ್ಥೆಯ ಹರಿಕಾರ ಒಂದು ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಎಳೆಯ ಪ್ರಾಯದಲ್ಲೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಲೆನಿನ್, ಬಂಡವಾಳಶಾಹಿಗಳ ಶೋಷಣೆಯಿಂದ ಆಕ್ರೋಶಿತರಾಗಿ ದುಡಿಯುವ ವರ್ಗದ ಪರವಾಗಿ ಸದಾ ಚಿಂತಿಸುತ್ತಿದ್ದರು. ದುಡಿಯುವ ವರ್ಗದ ಸಿದ್ದಾಂತವಾದ ಮಾರ್ಕ್ಸ್‌ವಾದವನ್ನು ಚೆನ್ನಾಗಿ ಅರ್ಥೈಸಿ ಅದರ ಆಧಾರದಲ್ಲಿ ಸಮಾಜದಲ್ಲಿ ಕ್ರಾಂತಿ ನಡೆಸುವ ಅಗತ್ಯತೆಯನ್ನು ಮನಗಂಡರು. ತನ್ನ ಬರಹಗಳನ್ನು ತೀಕ್ಷಗೊಳಿಸುವ ಮೂಲಕ ಕಾರ್ಮಿಕ ವರ್ಗವನ್ನು ಬಡಿದೆಬ್ಬಿಸಿದರು.ರಷ್ಯಾದ ಝಾರ್ ಆಳ್ವಿಕೆಯಿಂದ ತೀವ್ರ ಸಂಕಷ್ಟಗೊಳಗಾದ ಲೆನಿನ್ ಛಲಬಿಡದೆ ಕಾರ್ಮಿಕರನ್ನು ಒಗ್ಗೂಡಿಸಿ ಕ್ರಾಂತಿಯತ್ತ ಹೆಜ್ಜೆ ಹಾಕಿದರು.1917ರಲ್ಲಿ ಜರುಗಿದ ಸಮಾಜವಾದಿ ವ್ಯವಸ್ಥೆಯ ಅಕ್ಟೋಬರ್ ಕ್ರಾಂತಿ ಜಗತ್ತಿನ ಚರಿತ್ರೆಯಲ್ಲಿ ಹೊಸ ಮೈಲುಗಲ್ಲಾಯಿತು.ಈ ಮೂಲಕ ಕ್ರಾಂತಿಯ ಹರಿಕಾರ ಲೆನಿನ್ ರವರ ಸಂಘಟನಾ ಚಾತುರ್ಯವನ್ನು ಜಗತ್ತೇ ಕೊಂಡಾಡಿತು ಎಂದು ಹೇಳಿದರು.
ಪ್ರಗತಿಪರ ಚಿಂತಕರಾದ ಡಾ.ಕೃಷ್ಣಪ್ಪ ಕೊಂಚಾಡಿಯವರು ಮಾತನಾಡಿ, ಮಾರ್ಕ್ಸ್ ವಾದಿ ಸಿದ್ದಾಂತದ ಆಧಾರದಲ್ಲಿ ಕಾರ್ಮಿಕ ವರ್ಗದ ನೇತ್ರತ್ವದಲ್ಲಿ ಸರಕಾರ ರಚಿಸಲು ಸಾಧ್ಯವಿದೆ ಎಂದು ಜಗತ್ತಿಗೆ ತೋರಿಸಿಕೊಟ್ಟ ಲೆನಿನ್, ಜಾಗತಿಕ ಬಂಡವಾಳ ಶಾಹಿಗಳ ಕೆಂಗಣ್ಣಿಗೆ ಗುರಿಯಾದರು.ಕ್ರಾಂತಿ ನಡೆದ ಬಳಿಕ ಲೆನಿನ್ ನೇತೃತ್ವದಲ್ಲಿ ರಷ್ಯಾದಲ್ಲಿ ನಡೆಸಿದ ಸಾಮಾಜಿಕ ಸುಧಾರಣೆಗಳು ಜಗತ್ಪ್ರಸಿದ್ಧವಾಯಿತು.ಈ ಮೂಲಕ ಜಗತ್ತಿನಾದ್ಯಂತ ಕಮ್ಯುನಿಸ್ಟ್ ಚಿಂತನೆಗಳು ವೇಗವಾಗಿ ಪಸರಿಸಿತು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಪ್ರಗತಿಪರ ಚಿಂತಕರಾದ ಸಂಜೀವ ಬಳ್ಕೂರುರವರು ಲೆನಿನ್ ರವರ ಬದುಕು ಬರಹಗಳ ಬಗ್ಗೆ ಬೆಳಕು ಚೆಲ್ಲುತ್ತಾ,ಇಂದಿನ ಯುವ ಪೀಳಿಗೆ ಹೆಚ್ಚೆಚ್ಚು ಲೆನಿನ್ ರವರನ್ನು ಅರ್ಥೈಸುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಸುನಿಲ್ ಕುಮಾರ್ ಬಜಾಲ್ ರವರು ಸ್ವಾಗತಿಸಿದರು, ಯೋಗೀಶ್ ಜಪ್ಪಿನಮೊಗರು ವಂದಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
28 ನೂತನ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಯಾರಿಗೆ ಯಾವ ಜಿಲ್ಲೆ?
ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವೇ?: ಶಾಸಕ ರೇಣುಕಾಚಾರ್ಯ
ಮಕ್ಕಳನ್ನು ಹೆದರಿಸಲು ಗುಂಡು ಹಾರಿಸಿದ ಸಚಿವರ ಪುತ್ರನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು