ಯುವ ಸಾಮಾಜಿಕ ಹೋರಾಟಗಾರ್ತಿ ನೇಮಿಚಂದ್ರ ನಿಧನ - Mahanayaka

ಯುವ ಸಾಮಾಜಿಕ ಹೋರಾಟಗಾರ್ತಿ ನೇಮಿಚಂದ್ರ ನಿಧನ

nemichandra
16/12/2021

ಬೆಂಗಳೂರು: ಯುವ ಸಾಮಾಜಿಕ ಹೋರಾಟಗಾರ್ತಿ ನೇಮಿಚಂದ್ರ ಅವರು, ಅನಾರೋಗ್ಯದಿಂದ ನಿಧನ ಹೊಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತವಾಗಿದೆ. ಸ್ನೇಹ ಜೀವಿಯಾಗಿದ್ದ ಅವರ ನಿಧನ ಆಘಾತ ತಂದಿದೆ ಎಂದು ಸಾಮಾಜಿಕ ಹೋರಾಟಗಾರರು ದುಃಖ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಮೂಲದ 27 ವರ್ಷ ವಯಸ್ಸಿನ ನೇಮಿಚಂದ್ರ ಅವರು, ಬಡವರ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.  ಕಾನೂನು ಪದವಿ ವ್ಯಾಸಂಗದ ಜೊತೆಗೆ ಸಾಮಾಜಿಕ ಹೋರಾಟಗಳಲ್ಲಿ ಅವರು ಸಕ್ರಿಯರಾಗಿದ್ದರು.

ಕೆಲವು ವರ್ಷಗಳಿಂದ ನ್ಯುಮೊನಿಯಾದಿಂದ ಬಳಲುತ್ತಿದ್ದ ನೇಮಿಚಂದ್ರ ಅವರು ಇತ್ತೀಚೆಗೆ ಅಸ್ವಸ್ಥರಾಗಿದ್ದರು. ಬೆಂಗಳೂರಿನ ಮಲ್ಲೇಶ್ವರಂ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ನೇಮಿ ಚಂದ್ರ ಅವರ ನಿಧನಕ್ಕೆ ನಟ ಅಹಿಂಸಾ ಚೇತನ್ ಸಂತಾಪ ಸೂಚಿಸಿದ್ದು, ನಾನು ನೇಮಿಯನ್ನು 2016ರ ನಮ್ಮ ಧಿಡಳ್ಳಿ ಹೋರಾಟದ (ಕೊಡಗು) ಸಮಯದಲ್ಲಿ ನಾವಿಬ್ಬರೂ ಒಟ್ಟಾಗಿ ಹೋರಾಡಿದಾಗ ಭೇಟಿಯಾದೆ. ತನ್ನ ಶಿಕ್ಷಣವನ್ನು ಮುಂದುವರಿಸುತ್ತಿದ್ದಾಗಲೇ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆನ್ನುವ ನೇಮಿಯವರ ಮನೋಭಾವವು ಅದ್ಭುತವಾದದ್ದು.  ಆಕೆಯ ನಿಧನದ ಸುದ್ದಿಯನ್ನು ಕೇಳಿ ಬಹಳ ದುಃಖವಾಯಿತು. ಆಕೆಯ ಸ್ಮರಣೆಯಲ್ಲಿ, ನಿರಾಶ್ರಿತರಿಗೆ ನಾವು ಸೇವೆ ಸಲ್ಲಿಸಲು ಹೆಚ್ಚು ಶ್ರಮಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮತಾಂತರ ನಿಷೇಧ ಮಸೂದೆ: ಬಿಜೆಪಿ ಶಾಸಕಾಂಗ ಸಭೆಯಲ್ಲಿ ನಡೆದ ಚರ್ಚೆಗಳೇನು?

ರಂಗಾಯಣದಲ್ಲಿ ರಾಜಕೀಯ ನಾಟಕ: ಠಾಣೆ ಮೆಟ್ಟಿಲೇರಿದ ರಂಗಾಯಣ-ಪ್ರಗತಿಪರರ ವಿವಾದ

ನನ್ನ ಕ್ಯಾರೆಕ್ಟರ್ ಬಗ್ಗೆ ಹೇಳ್ಬೇಕಂದ್ರೆ, ನೀವು ಟ್ರೈಲರ್ ನೋಡಬೇಕು | ರಶ್ಮಿಕಾ ಮಂದಣ್ಣ

ಬೂದಿ ಮುಚ್ಚಿದ ಕೆಂಡದಂತಿದ್ದ ಉಪ್ಪಿನಂಗಡಿ ಸಹಜ ಸ್ಥಿತಿಯತ್ತ!

ಸಿದ್ದರಾಮಯ್ಯ ವೇಸ್ಟ್ ಬಾಡಿ, ಅವನ ಕಥೆ ಮುಗಿದಿದೆ | ರಮೇಶ್ ಜಾರಕಿಹೊಳಿ

ಕಾನದ-ಕಟದರ ಜನನ: ತುಳುನಾಡಿನ ಅವಳಿ ವೀರರು-ಕಾನದ ಕಟದರು | ಸಂಚಿಕೆ: 10

ಇತ್ತೀಚಿನ ಸುದ್ದಿ