ಕೊರೊನಾದಿಂದ ತತ್ತರಿಸಿರುವ ಜನರಿಗೆ ನಟಿ ರಾಗಿಣಿ ದ್ವಿವೇದಿ ನೆರವು
06/05/2021
ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಈ ಹಿಂದೆಯೂ ಜನರಿಗೆ ನೆರವು ನೀಡಿದ್ದ ನಟಿ ರಾಗಿಣಿ ದ್ವಿವೇದಿ, ಈ ಬಾರಿಯೂ ತಮ್ಮಿಂದಾದ ಸಹಾಯಕ್ಕೆ ಮುಂದಾಗಿದ್ದಾರೆ. ಸ್ಮಶಾನ ಹಾಗೂ ಚಿತಾಗಾರದಲ್ಲಿ ದಿನವಿಡೀ ದುಡಿಯುತ್ತಿರುವ ಸಿಬ್ಬಂದಿ ಸೇರಿದಂತೆ ವಿವಿಧ ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಮಾಡಿದ್ದಾರೆ.
ರಾಜ್ಯದ ಸ್ವಚ್ಛತಾ ಯೋಧರಾದ ಪೌರ ಕಾರ್ಮಿಕರಿಗೆ ಕೂಡ ರಾಗಿಣಿ ದ್ವಿವೇದಿ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಮೊನ್ನೆಯಷ್ಟೇ ಪೊಲೀಸ್ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿಸಿದ್ದರು. ಇದರ ಜೊತೆಗೆ ಜಿನೆಕ್ಸ್ಟ್ ಚಾರಿಟೇಬಲ್ ಟ್ರಸ್ಟ್ ನೇತೃತದವ್ಲದಲ್ಲಿ ಕಾಕ್ಸ್ ಟೌನ್ ಬಳಿಯ ಕಲ್ಪಹಳ್ಳಿಯ ಸ್ಮಶಾನದ ಜನರಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸಿದ್ದಾರೆ.
ಇನ್ನೂ ನಗರದ ಕಂಠೀರವ ಸ್ಟೇಡಿಯಂ ಹಾಗೂ ಎಂ.ಜಿ.ರಸ್ತೆಯ ಸುತ್ತಮುತ್ತ ಹಸಿವಿನಿಂದ ರಸ್ತೆ ಬದಿಯಲ್ಲಿ ಕುಳಿತಿದ್ದವರಿಗೂ ಆಹಾರದ ಪೊಟ್ಟಣ ನೀಡುವ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ್ದಾರೆ.