ಮಹಿಳೆಯ ಮೇಲೆ ಹಲ್ಲೆ: ಸಾಮಾಜಿಕ ಕಾರ್ಯಕರ್ತ ಸಹಿತ ಮೂವರ ಬಂಧನ - Mahanayaka
2:55 PM Wednesday 11 - December 2024

ಮಹಿಳೆಯ ಮೇಲೆ ಹಲ್ಲೆ: ಸಾಮಾಜಿಕ ಕಾರ್ಯಕರ್ತ ಸಹಿತ ಮೂವರ ಬಂಧನ

arrested
03/04/2022

ಮಂಗಳೂರು: ಮಹಿಳೆಗೆ ಹಲ್ಲೆ ನಡೆಸಿದ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ಆಸಿಫ್ ಸೇರಿದಂತೆ  ಮೂವರನ್ನು ಮಂಗಳೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಸೀಫ್(39), ಶಿವಲಿಂಗ(40), ಅಫ್ತಾಬ್(32 ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. 40 ವರ್ಷ ವಯಸ್ಸಿನ ವನಜಾ ಎಂಬವರು ಹಲ್ಲೆಗೊಳಗಾಗಿರುವ ಮಹಿಳೆಯಾಗಿದ್ದಾರೆ ಎಂದು ವರದಿಯಾಗಿದೆ.

ಕೊವಿಡ್ ಕಾಲದಲ್ಲಿ ಕೆಲಸ ಕಳೆದುಕೊಂಡಿದ್ದ ವನಜಾ ಅವರು ಆಸಿಫ್ ಅವರ ಬಳಿ ನೆರವು ಕೇಳಿ, ಮೈಮುನಾ ಪೌಂಡೇಶನ್ ನ ಆಶ್ರಮಕ್ಕೆ ಸೇರ್ಪಡೆಗೊಂಡಿದ್ದರು. ಒಂದು ವರ್ಷದಿಂದ ಅಲ್ಲಿ ಆಶ್ರಯಪಡೆಯುತ್ತಿದ್ದರು ಎನ್ನಲಾಗಿದೆ.

ಈ ನಡುವೆ ಆಶ್ರಮದ ವಾರ್ಡನ್, ಮ್ಯಾನೇಜರ್ ಶಶಿಧರ್ ಎಂಬಾತ ಸಂಸ್ಥೆಗೆ ವಂಚನೆ ಮಾಡಿ ಪರಾರಿಯಾಗಿದ್ದು, ಇದರಲ್ಲಿ ವನಜಾ ಅವರ ಕೈವಾಡ ಇದೆ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು  ದೂರಲಾಗಿದೆ.

ಮಹಿಳೆಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಮಂಗಳೂರು ಮಹಿಳಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

80 ಸಾವಿರ ರೂ. ಖರ್ಚು ಮಾಡಿ ಪ್ರೀತಿಯ ನಾಯಿಯ ಪ್ರತಿಮೆ ನಿರ್ಮಿಸಿದ ಯಜಮಾನ!

ಲೋಕಾರ್ಪಣೆಯಾಗಲಿದೆ ಸ್ಮಾರ್ಟ್‌ ಬಸ್‌ ಪಾಸ್‌: ಈ ಆ್ಯಪ್ ನ ವಿಶೇಷತೆ ಏನು?

ಮೊಸಳೆಯ ಬಾಯಿಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಯುವಕ!

ಬೆಳ್ತಂಗಡಿ: ಅನಾರೋಗ್ಯ ಪೀಡಿತ ದಲಿತ ವೃದ್ಧ ದಂಪತಿ ಮನೆ ಸಹಿತ ಹಲವರ ಮನೆಯ ಕುಡಿಯುವ ನೀರಿನ ಸಂಪರ್ಕ ಕಡಿತ

ಕಡಿಮೆ ರೇಟ್ ನಲ್ಲಿ ಜಟ್ಕಾ ಮಾಂಸ ಮಾರಾಟ: ಬಜರಂಗದಳ ಮುಖಂಡ ತೇಜಸ್ ಗೌಡ

ಇತ್ತೀಚಿನ ಸುದ್ದಿ