ಇದೊಂದು ಸಮ್ಮತದ ಲೈಂಗಿಕ ಕ್ರಿಯೆ | ದಿನೇಶ್ ಕಲ್ಲಹಳ್ಳಿ ವಿರುದ್ಧದ ದೂರಿನಲ್ಲಿ ಏನಿದೆ?
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಕಲ್ಲಹಳ್ಳಿ ವಿರುದ್ಧ ನಿನ್ನೆ ದೂರು ದಾಖಲಾಗಿದೆ. ಈ ದೂರಿನಲ್ಲಿ ಪ್ರಸ್ತಾಪಿಸಿದ ಮುಖ್ಯ ವಿಷಯಗಳು ದಿನೇಶ್ ಕಲ್ಲಹಳ್ಳಿ ವಿರುದ್ಧವೇ ತಿರುಗುತ್ತದೆಯೇ ಎನ್ನುವ ಅನುಮಾನಗಳು ಸದ್ಯ ಕಂಡು ಬಂದಿದೆ.
ಕರ್ನಾಟಕ ಕನ್ನಡಪರ ಸಂಘಟನೆ ಒಕ್ಕೂಟ ಸಂಸ್ಥಾಪಕ ಅಧ್ಯಕ್ಷ ಪಟ್ಟೇಗೌಡ ದಿನೇಶ್ ಕಲ್ಲಹಳ್ಳಿ ವಿರುದ್ಧವೇ ದೂರು ದಾಖಲಿಸಿದ್ದರು. ಈ ದೂರಿನಲ್ಲಿ ಹೇಳಿರುವಂತೆ ಇದೊಂದು ಸಮ್ಮತದ ಲೈಂಗಿಕ ಕ್ರಿಯೆಯಾಗಿದ್ದು, ರಮೇಶ್ ಜಾರಕಿಹೊಳಿಯ ಖಾಸಗಿ ವಿಡಿಯೋವನ್ನು ವೈರಲ್ ಮಾಡಲಾಗಿದೆ. ದಿನೇಶ್ ಕಲ್ಲಹಳ್ಳಿಗೂ ಈ ವಿಡಿಯೋಗೂ ಏನು ಸಂಬಂಧ ಎಂದು ಅವರು ಪ್ರಶ್ನಿಸಿದ್ದಾರೆ.
ಖಾಸಗಿ ಜೀವನದಲ್ಲಿ ಯಾರು ಏನು ಬೇಕಾದರೂ ಮಾಡುತ್ತಾರೆ. ಅದನ್ನು ಚಿತ್ರೀಕರಿಸಿ ಸಾರ್ವಜನಿಕವಾಗಿ ಹರಿಯಬಿಡುವುದು ಚಾರಿತ್ರ್ಯ ಹರಣಕ್ಕೆ ನಡೆಸಿದ ಸಂಚಾಗಿದೆ ಎಂದು ಎಂದು ದಿನೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಯುವತಿಗೆ ಅನ್ಯಾಯವಾಗಿದ್ದರೆ ಯುವತಿಯೇ ದೂರು ನೀಡಬಹುದಿತ್ತು. ಈ ಬಗ್ಗೆ ತಕ್ಷಣವೇ ದಿನೇಶ್ ಕಲ್ಲಹಳ್ಳಿಯನ್ನು ಬಂಧಿಸಿ ವಿಚಾರಣೆ ನಡೆಸಬೇಕು. ಸಿಡಿ ಪ್ರಕರಣ ಒಂದು ರಾಜಕೀಯ ಷಡ್ಯಂತ್ರ ಎಂದು ಸದ್ಯ ಬಿಂಬಿಸಲಾಗುತ್ತಿದೆ.