ಜನರಿಗೆ ಹೊಟ್ಟೆಗೆ ಹಿಟ್ಟಿಲ್ಲ, ಸಂಸದ-ಸಚಿವರ ದರ್ಬಾರ್ ಗೆ ಕೊನೆ ಇಲ್ಲ | ದುಬಾರಿ ಕಾರ್!
24/02/2021
ಬೆಂಗಳೂರು: ಜನರ ಸಂಕಷ್ಟಗಳಿಗೆ ಪರಿಹಾರ ನೀಡಲು ಸರ್ಕಾರದ ಬಳಿಯಲ್ಲಿ ಹಣವಿಲ್ಲ. ಆದರೆ, ರಾಜ್ಯದ ಸಂಸದರು ಹಾಗೂ ಸಚಿವರ ಕಾರು ಖರೀದಿಯ ಮೊತ್ತವನ್ನು ಸರ್ಕಾರ ಹೆಚ್ಚಿಸಿದೆ.
ರಾಜ್ಯದ ಎಲ್ಲ ಸಚಿವರು ಮತ್ತು ಸಂಸದರು ಇನ್ನು ಮುಂದೆ 23 ಲಕ್ಷ ರೂ. ವೆಚ್ಚದ ಕಾರು ಖರೀದಿಸಲು ಅವಕಾಶವಿದೆ. ಈ ಹಿಂದಿನ ರಾಜ್ಯ ಸರ್ಕಾರ ಕಾರು ಖರೀದಿಗೆ 22 ಲಕ್ಷ ಮೀಸಲಿರಿಸಿದ್ದರೆ, ಇದೀಗ ಸಚಿವರು ಹಾಗೂ ಸಂಸದರ ಒತಡದಿಂದಾಗಿ 23 ಲಕ್ಷ ರೂ.ಗಳಿಗೆ ಕಾರು ಖರೀದಿಸಲು ಅವಕಾಶ ನೀಡಲಾಗಿದೆ.
ಸರ್ಕಾರದ ಪ್ರತಿ ಯೋಜನೆಗಳಿಗೂ ಹಣವಿಲ್ಲ, ಸರ್ಕಾರದ ಬೊಕ್ಕಸ ಖಾಲಿಯಾಗಿದೆ, ಕೊರೊನ ಸಂಕಷ್ಟ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ ಇದೀಗ ಸಂಸದರ ಸವಾರಿಗೆ ದುಬಾರಿ ಕಾರುಗಳಿಗಾಗಿ ಯಾವುದೇ ಸಂಕಷ್ಟಗಳಿಲ್ಲದೇ ಹಣ ನೀಡಲು ಮುಂದಾಗಿದೆ.