ಸಂಸದನ ಮನೆಗೆ ಸೋಡಾ ಬಾಟ್ಲಿಯಿಂದ ದಾಳಿ ನಡೆಸಿದ ನಾಲ್ವರು ದುಷ್ಕರ್ಮಿಗಳು
ಮುಂಬೈ: ಕೇಂದ್ರ ಸಚಿವ ನಾರಾಯಣ್ ರಾಣೆ ಬಂಧನ ವಿಚಾರವಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನಾ ಕಾರ್ಯಕರ್ತರ ನಡುವಿನ ಸಂಘರ್ಷ ಮುಂದುವರಿಸಿದ್ದು, ಇದೀಗ ಶಿವಸೇನಾ ಸಂಸದ ವಿನಾಯಕ್ ರಾವತ್ ಅವರ ಬಂಗಲೆ ಮೇಲೆ ಸೋಡಾ ಬಾಟಲಿಯನ್ನು ಎಸೆದು ಮತ್ತೆ ಸಂಘರ್ಷ ಸೃಷ್ಟಿಸಲಾಗಿದೆ.
ಮುಂಬೈಯಿಂದ 500 ಕಿಲೋ ಮೀಟರ್ ದೂರದಲ್ಲಿರುವ ಮಾಳವನ್ ನ ಕರಾವಳಿ ಪ್ರದೇಶ ರೌತವಾಡಿಯಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಹೇಳಿಕೆ ಕುರಿತಾಗಿ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ರಾವತ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಈ ದಾಳಿ ನಡೆದಿದೆ.
ಸುಮಾರು ನಾಲ್ವರು ಅಪರಿಚಿತರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗ್ತಿದೆ. ಸದ್ಯ ಈ ಬಂಗಲೆಯನ್ನು ನಿರ್ವಹಣೆ ಮಾಡುತ್ತಿರುವವರು ನೀಡಿರುವ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 336, 34, 37 (1) ಮತ್ತು 135ರ ಅಡಿಯಲ್ಲಿ ಅಪರಿಚಿತರ ವಿರುದ್ದ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ನಟಿಯರು ಡ್ರಗ್ಸ್ ಸೇವಿಸಿದ್ದು ದೃಡವಾಗಿದೆ, ಕೇಸ್ ಇನ್ನಷ್ಟು ಗಟ್ಟಿಯಾಗಿದೆ | ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದೇನು?
ಮಹಿಳೆಯರು ಮನೆಯಲ್ಲಿಯೇ ಇರಿ, ಇಲ್ಲವಾದರೆ ಉಗ್ರರು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳಬಹುದು | ತಾಲಿಬಾನ್ ನಾಯಕ
ತಮಿಳುನಾಡು ಬಿಜೆಪಿ ನಾಯಕನ ಅಶ್ಲೀಲ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್
ಎನ್. ಮಹೇಶ್ ಹಿಂದೂ ಧರ್ಮಕ್ಕೆ ಬೈದು ಶಾಸಕರಾದವರು! | ಎನ್.ಮಹೇಶ್ ವಿರುದ್ಧ ಅಪಸ್ವರ ಎತ್ತಿದ ಬಿಜೆಪಿ ಶಾಸಕ
ತೆನೆ ಇಳಿಸಿ, ಕೈ ಹಿಡಿಯುತ್ತಾರಾ ಜಿ.ಟಿ.ದೇವೇಗೌಡ? | ಅವಮಾನಗಳಿಂದ ಬೇಸತ್ತು ಜೆಡಿಎಸ್ ಬಿಡಲು ತೀರ್ಮಾನ!
“ನನ್ನನ್ನು ಮದುವೆಗೆ ಯಾಕೆ ಕರೆದಿಲ್ಲ” ಎಂದು ಪ್ರಶ್ನಿಸಿ ನವವಿವಾಹಿತನಿಗೆ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕ!
ಈ ಬಾರಿ ಆನ್ ಲೈನ್ ನಲ್ಲೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ: ಸಚಿವ ಬಿ.ಶ್ರೀರಾಮುಲು
ರವಿಚಂದ್ರನ್ ಅವರ “ಯಮ್ಮೊ ಯಮ್ಮೋ ನೋಡ್ಬಾರ್ದನ್ನು ನಾ ನೋಡ್ಡೆ” ಅನ್ನೋ ಹಾಡು ಇಷ್ಟ ಎಂದ ನಟಿ ನವ್ಯಾ