ಮುಂದಿನ ವಾರ ಬಿಡುಗಡೆಯಾಗಲಿದೆ ಮೂರು ಹೊಸ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ ಸೀರೀಸ್ ಸ್ಮಾರ್ಟ್‌ಫೋನ್ ಗಳು

Samsung Galaxy A Series Smartphone– ಬೆಂಗಳೂರು: ಸ್ಯಾಮ್ ಸಂಗ್ ಮುಂದಿನ ವಾರ ಭಾರತದಲ್ಲಿ ಮೂರು ಹೊಸ ಗ್ಯಾಲಕ್ಸಿ ಎ ಸೀರೀಸ್ ಸ್ಮಾರ್ಟ್‌ಫೋನ್ ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಗ್ಯಾಲಕ್ಸಿ ಎ ಸೀರೀಸ್ ಭಾರತದಲ್ಲಿ ಸ್ಯಾಮ್‌ಸಂಗ್‌ನ ಬಹಳ ಯಶಸ್ವೀ ಫೋನ್ ಸೀರೀಸ್ ಆಗಿದ್ದು, ಭಾರತದಲ್ಲಿ ಪ್ರತೀ ವರ್ಷ ಈ ಸರಣಿಯ ಲಕ್ಷಾಂತರ ಫೋನ್ ಗಳು ಮಾರಾಟವಾಗುತ್ತವೆ.
ಈ ಹೊಸ ಗ್ಯಾಲಕ್ಸಿ ಎ ಸೀರೀಸ್ ಫೋನ್‌ಗಳು ಕಳೆದ ವರ್ಷ ಬಿಡುಗಡೆ ಆದ ಗ್ಯಾಲಕ್ಸಿ ಎ35 ಮತ್ತು ಗ್ಯಾಲಕ್ಸಿ ಎ55 ಫೋನ್ ಗಳ ನಂತರದ ವರ್ಷನ್ ಗಳಾಗಿರಲಿವೆ.
ಯುವ ಜನರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸ ಮಾಡಲಾಗಿರುವ ಈ ಗ್ಯಾಲಕ್ಸಿ ಎ ಸೀರೀಸ್ ಫೋನ್‌ಗಳು ಆಕರ್ಷಕ ಲುಕ್, ಜಾಸ್ತಿ ಬಾಳಿಕೆ, ಮತ್ತು ಅತ್ಯಾಧುನಿಕ ಭದ್ರತೆಯನ್ನು ಹೊಂದಿರಲಿದ್ದು, ಇದರಿಂದ ಬಳಕೆದಾರರಿಗೆ ಅತ್ಯುತ್ತಮ ಮತ್ತು ಸುರಕ್ಷಿತ ಅನುಭವ ದೊರೆಯಲಿದೆ.
ಕಳೆದ ಹಲವು ವರ್ಷಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸೀರೀಸ್‌ನಲ್ಲಿ ತನ್ನ ಹಲವಾರು ವಿಶಿಷ್ಟ ಫೀಚರ್‌ಗಳನ್ನು ಪರಿಚಯಿಸಿದೆ. ಈ ಮೂಲಕ ದೊಡ್ಡ ಮಟ್ಟದ ಗ್ರಾಹಕ ಸಮೂಹಕ್ಕೆ ಹೊಸ ಆವಿಷ್ಕಾರಗಳು ತಲುಪುವುದು ಸಾಧ್ಯವಾಗಿದೆ. ಈ ಮೂರು ಹೊಸ ಗ್ಯಾಲಕ್ಸಿ ಎ ಸೀರೀಸ್ ಫೋನ್‌ಗಳ ಬಿಡುಗಡೆ ಈ ಟ್ರೆಂಡ್ ಅನ್ನು ಮುಂದುವರಿಸುವ ಸಾಧ್ಯತೆ ಇದೆ, ಭಾರತೀಯ ಗ್ರಾಹಕರಿಗೆ ಇನ್ನಷ್ಟು ಹೊಸ ಆಯ್ಕೆಗಳನ್ನು ನೀಡಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: