ಸಮುದ್ರದ ಅಬ್ಬರಕ್ಕೆ ವಾಲಿ ನಿಂತ ಐತಿಹಾಸಿಕ ಸೇತುವೆ!
15/05/2021
ತಿರುವನಂತಪುರಂ: ಕೇರಳದ ರಾಜಧಾನಿಯಲ್ಲಿ ಸಮುದ್ರದ ಅಬ್ಬರ ಆತಂಕಕಾರಿಯಾಗಿದ್ದು, ಇಲ್ಲಿನ ಐತಿಹಾಸಿಕ ವಲಿಯತುರ ಸಮುದ್ರ ಸೇತುವೆಗೆ ಭಾರೀ ಹಾನಿಯಾಗಿದ್ದು, ಸೇತುವೆ ಕುಸಿಯುವ ಭೀತಿ ಉಂಟಾಗಿದೆ.
ಇಂದು ಮುಂಜಾನೆ ಸುಮಾರು 3:30ರ ವೇಳೆಗೆ ಸಮುದ್ರದ ಬಳಿಯಲ್ಲಿ ಬೃಹತ್ ಶಬ್ಧ ಕೇಳಿ ಬಂದಿದ್ದು ಇಲ್ಲಿ ನಿಯೋಜಿಸಲ್ಪಟ್ಟಿದ್ದ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಈ ವೇಳೆ ಸೇತುವೆಯಲ್ಲಿ ಬಿರುಕು ಕಂಡು ಬಂದಿದೆ.
ಸದ್ಯ ಸೇತುವೆಯು ವಾಲಿದ ಸ್ಥಿತಿಯಲ್ಲಿದ್ದು, ಆತಂಕಕಾರಿಯಾಗಿದೆ. ಸೇತುವೆಯ ಬದಿಯಲ್ಲಿರುವ ಕಂಬಗಳು ಅಲೆಯ ಅಬ್ಬರಕ್ಕೆ ಮುರಿದ ಪರಿಣಾಮ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.