ಮಲ್ಪೆ ಸಮುದ್ರದಲ್ಲಿ ಬಲೆಗೆ ಬಿದ್ದ ಗರಗಸ ಮೀನು !
ಉಡುಪಿ: ಅಳಿವಿನಂಚಿನಲ್ಲಿರುವ ಪ್ರಬೇಧದ “ಪ್ರಿಸ್ಟಿಸ್ ಪ್ರಿಸ್ಟಿಸ್”(ಗರಗಸ ಮೀನು) ಮೀನು ಮಲ್ಪೆ ಸಮುದ್ರದಲ್ಲಿ ಮೀನುಗಾರರಿಗೆ ಸಿಕ್ಕಿದೆ.
10 ಅಡಿ ಉದ್ದ ಹಾಗೂ 100 ಕೆ.ಜಿ. ತೂಕವಿರುವ ಮೀನಿನ ಹಲ್ಲುಗಳು ಗರಗಸ ಮಾದರಿಯಲ್ಲಿದ್ದು, ಇಂತಹ ಮೀನು ಮೂರು ಪ್ರಬೇಧಗಳಲ್ಲಿ ಕಂಡು ಬರುತ್ತವೆ.
ಈ ಮೀನಿನ ಹಲ್ಲುಗಳು ಗರಗಸ ಮಾದರಿಯಲ್ಲಿದ್ದು, ಹೀಗಾಗಿ ಸ್ಥಳೀಯವಾಗಿ ಇದನ್ನು ಗರಗಸ ಮೀನು ಎಂದು ಕರೆಯುತ್ತಾರೆ. ಸಮಶೀತೋಷ್ಣ ಹಾಗೂ ಉಷ್ಣವಲಯದ ಸಮುದ್ರಗಳಲ್ಲಿ ಈ ಮೀನು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರಸ್ತುತ ಇದು ಅಳಿವಿನಂಚಿನಲ್ಲಿರುವ ಮೀನಾಗಿದ್ದು, ಇದನ್ನು ಬೇಟೆಯಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಈ ಮೀನು ಚೂಪಾದ ತನ್ನ ಗರಗಸದಿಂದ ದಾಳಿ ಮಾಡಿ ಇತರ ಜಾತಿಯ ಮೀನುಗಳನ್ನು ತಿನ್ನುತ್ತದೆ. ಮೀನುಗಳು, ಶಂಕು, ಸೀಗಡಿ ಮೊದಲಾದವುಗಳು ಈ ಮೀನಿನ ಪ್ರಧಾನ ಆಹಾರವಾಗಿದ್ದು, ಸಮುದ್ರದಲ್ಲಿ 20 ಮೀಟರ್ ಆಳದಲ್ಲಿ ಇದು ಜೀವಿಸುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಅವನತಿ ಆರಂಭ: ಸಂಸದ ಪ್ರತಾಪ್ ಸಿಂಹ
ರಾಜೀವ್ ಹಂತಕ ಜಾಮೀನಿನಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ಮದುವೆಗೆ ಸಿದ್ಧತೆ!
ದೇಶದ 2ನೇ ಅತೀ ದೊಡ್ಡ ಶ್ರೀಮಂತ ಪಕ್ಷ ಬಿಎಸ್ ಪಿಗೆ ಹೀನಾಯ ಸೋಲು | ಮಾಯಾವತಿಜಿ ಇದು ನ್ಯಾಯವೇ?
ಪೊಲೀಸರ ಮೇಲೆ ಹೆಜ್ಜೇನು ದಾಳಿ: ಇಬ್ಬರು ಗಂಭೀರ
ಪಂಜಾಬ್ ನಲ್ಲಿ ಬಿಜೆಪಿಗೆ ನೆಲೆ ಇರಲಿಲ್ಲ: ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ