ಮಂಗಳೂರು: ಆಳ ಸಮುದ್ರದಲ್ಲಿ ಬೋಟ್ ಗೆ ಹಡಗು ಡಿಕ್ಕಿ | ಇಬ್ಬರು ಸಾವು, 12 ಮಂದಿ ನಾಪತ್ತೆ
13/04/2021
ಮಂಗಳೂರು: ಆಳ ಸಮುದ್ರದಲ್ಲಿ ಹಡಗು ಹಾಗೂ ಮೀನುಗಾರಿಕೆ ಬೋಟ್ ಅಪಘಾತವಾದ ಪರಿಣಾಮ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ.
ಮಂಗಳೂರು ಬಂದರಿನಿಂದ 43 ನಾಟೆಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದ್ದು, ತಮಿಳುನಾಡು ಮತ್ತು ಬಂಗಾಳ ಮೂಲದ ಕಾರ್ಮಿಕರಿದ್ದ ಮೀನುಗಾರಿಕಾ ಬೋಟ್ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಬೇಪೋರ್‌ನಿಂದ ಹೊರಟಿದ್ದು, ಮಂಗಳೂರು ಬಂದರಿನಿಂದ ನೂರಾರು ಕಿ.ಮೀ ದೂರದ ಆಳ ಸಮುದ್ರದಲ್ಲಿ ಹಡಗು ಹಾಗೂ ಮೀನುಗಾರಿಕಾ ಬೋಟ್ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿದೆ ಎಂದು ವರದಿಯಾಗಿದೆ.
ಘಟನೆಯ ಪರಿಣಾಮ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಇಂಡಿಯನ್ ಕೋಸ್ಟ್ ಗಾರ್ಡ್‌ನ ಮೂರು ಹಡಗು ಹಾಗೂ ಏರ್ ಕ್ರಾಫ್ಟ್ ಮೂಲಕ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ನಾಪತ್ತೆಯಾದವರಿಗೆ ಶೋಧ ಕಾರ್ಯ ಮುಂದುವರೆದಿದೆ.