ಅಸಾನಿ ಚಂಡಮಾರುತ: ಸಮುದ್ರದಲ್ಲಿ ತೇಲಿ ಬಂದ ಚಿನ್ನದ ಬಣ್ಣದ ರಥ!
ಆಂಧ್ರಪ್ರದೇಶ: ಅಸಾನಿ ಚಂಡಮಾರುತ ದೇಶಾದ್ಯಂತ ತನ್ನ ಪ್ರಭಾವ ತೋರಿಸುತ್ತಿದ್ದು, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಮಳೆಯಾಗುತ್ತಿದೆ.
ಅಸಾನಿ ಚಂಡಮಾರುತದ ನಡುವೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಕರಾವಳಿಯಲ್ಲಿ ಚಿನ್ನದ ಬಣ್ಣದ ರಥವೊಂದು ಸಮುದ್ರದಲ್ಲಿ ಕೊಚ್ಚಿಕೊಂಡು ಬಂದಿದ್ದು, ಇದು ಅಚ್ಚರಿಕೆ ಕಾರಣವಾಗಿದೆ.
ಬೌದ್ಧ ಶೈಲಿಯಲ್ಲಿರುವ ಈ ರಥ ಮ್ಯಾನ್ಮಾರ್, ಮಲೇಷಿಯಾ, ಥೈಲ್ಯಾಂಡ್ ನಿಂದ ತೇಲಿ ಬಂದಿರಬಹುದು ಎಂದು ಸದ್ಯ ಊಹಿಸಲಾಗಿದೆ. ರಥವನ್ನು ವೀಕ್ಷಿಸಲು ನೆರೆಹೊರೆಯ ಗ್ರಾಮಸ್ಥರು ಜಮಾಯಿಸಿದ್ದು, ವಿಶಿಷ್ಟವಾದ ಈ ರಥ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.
ಗ್ರಾಮಸ್ಥರು ಹಗ್ಗಗಳ ಸಹಾಯದಿಂದ ಇದನ್ನು ದಡಕ್ಕೆ ಎಳೆದಿದ್ದಾರೆ. ಚಿನ್ನದ ರಥದ ದರ್ಶನ ಪಡೆಯಲು ಅಕ್ಕಪಕ್ಕದ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ದಡದತ್ತ ಆಗಮಿಸಲಾರಂಭಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನೇಣುಬಿಗಿದ ಸ್ಥಿತಿಯಲ್ಲಿ ಸಚಿವರ ಸೊಸೆಯ ಮೃತದೇಹ ಪತ್ತೆ
ಸುಪ್ರಭಾತ ಅಭಿಯಾನದಿಂದ ಹಿಂದಕ್ಕೆ ಸರಿದ ಪ್ರಮೋದ್ ಮುತಾಲಿಕ್
ಮಸೀದಿ, ಚರ್ಚ್, ದೇಗುಲಗಳಲ್ಲಿ ಮೈಕ್ ಬಳಕೆಗೆ ನಿಯಮ ರೂಪಿಸಲಾಗುತ್ತಿದೆ: ಸಚಿವ ಆನಂದ್ ಸಿಂಗ್
ರೈಲಿನಲ್ಲೂ ಲೌಡ್ ಸ್ಪೀಕರ್ ಗೆ ಕಂಟಕ! | ಲೌಡ್ ಸ್ಪೀಕರ್ ನಿಷೇಧಿಸಿದ ರೈಲ್ವೆ ಇಲಾಖೆ