ಸಂವಿಧಾನ ದಿನದಂದೇ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸರ್ಕಾರದಿಂದ ಅಗೌರವ!
ಬೆಂಗಳೂರು: ಇಂದು ಗಣರಾಜ್ಯೋತ್ಸವ ಅಥವಾ ಸಂವಿಧಾನ ದಿನವಾಗಿದ್ದರೂ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಹೂವಿನ ಹಾರ ಹಾಕಿ ಗೌರವಿಸದೇ ಸರ್ಕಾರ ಅವಮಾನಿಸಿದೆ ಎಂದು ಯುವ ಹೋರಾಟಗಾರ ವೇಣುಗೋಪಾಲ್ ಮೌರ್ಯ ಆರೋಪಿಸಿದ್ದಾರೆ.
ಸಂವಿಧಾನ ಜಾರಿ ಮಾಡಿದ ದಿನದಂದು ಕೂಡ ಸರ್ಕಾರ ಅಂಬೇಡ್ಕರ್ ಪ್ರತಿಮೆಗೆ ಹೂವಿನ ಹಾರ ಹಾಕದೇ ಗೌರವ ತೋರಲಾಗಿದೆ. ಈ ರೀತಿಯ ವರ್ತನೆ ತೋರಿದ ರಾಜ್ಯ ಸರ್ಕಾರಕ್ಕೆ ವೇಣು ಗೋಪಾಲ್ ಧಿಕ್ಕಾರ ಕೂಗಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಇರದಿದ್ದರೆ, ಇಂತಹ ಶ್ರೇಷ್ಟ ಸಂವಿಧಾನ ಜಾರಿಯಾಗುತ್ತಿರಲಿಲ್ಲ. ಅಂತಹ ಸಂವಿಧಾನ ಬರೆದಿರುವ ವ್ಯಕ್ತಿಗೆ ಈ ದಿನದಂದು ಪುಷ್ಪಹಾರ ಹಾಕಿ ಗೌರವಿಸದೇ ನೀವು ಯಾವ ರೀತಿಯ ರಾಜಕೀಯ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನಾರಾಯಣ ಗುರುಗಳ ಬಗ್ಗೆ ಎಲ್ಲರಿಗೂ ಅಭಿಮಾನ ಇದೆ: ಸಚಿವ ಎಸ್.ಅಂಗಾರ
ನಾಪತ್ತೆಯಾಗಿದ್ದ ಯುವಕನ ಬಿಡುಗಡೆಗೆ ಚೀನಾ ಒಪ್ಪಿಗೆ: ಕೇಂದ್ರ ಸಚಿವ ಕಿರಣ್ ರಿಜಿಜು
ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಕಟ್ಟಿ ಎಸೆದ ಆರೋಪಿಗಳ ಬಂಧನ