ಸಂವಿಧಾನ ಜಾರಿಗೆ ಬಂದ ದಿನ ಗಣರಾಜ್ಯೋತ್ಸವ
- ರಘೋತ್ತಮ ಹೊ.ಬ.
ಇಂದು ಸಂವಿಧಾನ ಜಾರಿಗೆ ಬಂದ ದಿನ. ಈ ಸಂವಿಧಾನ ಜಾರಿಗೆ ಬರುವ ಮೊದಲು ನಾವು ಅನೇಕ ಪ್ರಾಚೀನ ವಿವಿಧ ಧಾರ್ಮಿಕ ಸ್ಮೃತಿಗಳು, ಮಹಮ್ಮದೀಯರು ಮತ್ತು ಬ್ರಿಟಿಷರು ತಮಗಾಗಿ ರೂಪಿಸಿಕೊಂಡಿದ್ದ ಕೆಲವು ಕಾನೂನುಗಳಿಂದ ನಾವು ಆಳಲ್ಪಡುತ್ತಿದ್ದೆವು. ಆ ಕಾರಣಕ್ಕೆ ಅನೇಕರಿಗೆ ಶಿಕ್ಷಣ ಸಿಕ್ಕಿರಲಿಲ್ಲ. ಯಾಕೆಂದರೆ ಸ್ಮೃತಿಗಳಲ್ಲಿ ಶಿಕ್ಷಣ ಕೊಡಬೇಕು ಎಂಬ ಕಾನೂನು ಇರಲಿಲ್ಲ. ಮಹಿಳೆಯರಿಗೆ ಯಾವುದೇ ಬಗೆಯ ಸ್ವಾತಂತ್ರ್ಯ ಇರಲಿಲ್ಲ. ಯಾಕೆಂದರೆ ಸ್ಮೃತಿ ಮತ್ತು ಮಹಮ್ಮದೀಯ ಕಾನೂನುಗಳು ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಆದರೆ ಭಾರತದ ಸಂವಿಧಾನ ಎಲ್ಲಾ ಲೋಪಗಳನ್ನು ಇಡೀ ದೇಶಕ್ಕೆ ಒಂದು ಸಾಮಾನ್ಯ ಕಾನೂನು ನೀಡಿತು. ಆ ಕಾನೂನು ಜಾರಿಗೆ ಬಂದ ದಿನವಿದು. ಅಂತಹ ಜಾರಿಗೆ ತರುವ ಪ್ರಕ್ರಿಯೆ ಒಂದೇ ದಿನದಲ್ಲಿ ಆಗುವಂತಹದ್ದಲ್ಲ ಅದೊಂದು ನಿರಂತರ ಪ್ರಕ್ರಿಯೆ. ಬಹುಶಃ ಈ ಭೂಮಿ ಇರುವವರೆಗೂ. ಯಾಕೆಂದರೆ men may come men may go but ಆ ಕಾನೂನು ಅದು ಸದಾ ಜಾರಿಯಲ್ಲಿರುತ್ತದೆ.
ಸಣ್ಣಪುಟ್ಟ ಬದಲಾವಣೆಗಳಾಗಬಹುದು. ಅದಕ್ಕೆ ತಿದ್ದುಪಡಿಗಳ ಮೂಲಕ ಸಂವಿಧಾನವೇ ಅವಕಾಶ ಮಾಡಿಕೊಟ್ಟಿದೆ. ಆದರೆ overall ಇಡೀ ಸಂವಿಧಾನ ಬದಲಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ದೇಶ ಅಸ್ತಿತ್ವ ಹೊಂದಿರುವುದೇ ಸಂವಿಧಾನದ ಅನುಚ್ಛೇದ 1 ರ ಆಧಾರದ ಮೇಲೆ. ಹೀಗಿರುವಾಗ ಅದನ್ನು ಬದಲಿಸುವ ಮಾತು ದೇಶಕ್ಕೆ ಸಂಬಂಧಪಡದವರ ಅಂದರೆ ಹೊರಗಿನವರು ಮಾತಾಡುವ ಕ್ರಿಯೆಯ ಮಾದರಿಯಾಗುತ್ತದೆ, ದೇಶದ್ರೋಹವಾಗುತ್ತದೆ.
ಸಣ್ಣಪುಟ್ಟ ತೊಂದರೆಗಳಿದ್ದರೆ ಅದೇ ಸಂವಿಧಾನದ ಅನುಚ್ಛೇದ 32 ನೀಡಿರುವ ಸಂವಿಧಾನಾತ್ಮಕ ಪರಿಹಾರಗಳ ಹಕ್ಕುಗಳನ್ನು ಬಳಸಿ ಪರಿಹಾರ ಪಡೆಯಬಹುದು. [ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರರು ಈ ಅನುಚ್ಛೇದ 32 ನ್ನು ಸಂವಿಧಾನದ ಆತ್ಮ ಎನ್ನುತ್ತಾರೆ] ಅದು ಬಿಟ್ಟು ಸಂವಿಧಾನದ ವಿರುದ್ಧ ಮಾತನಾಡುವುದು ಎಂದಿಗೂ ಸಲ್ಲ. ಎಲ್ಲರಿಗೂ ಸಂವಿಧಾನ ಜಾರಿಗೊಂಡ ಈ ದಿನದ ಅಂದರೆ ಗಣತಂತ್ರದ ದಿನದ ಶುಭಾಶಯಗಳು ಸಂವಿಧಾನವನ್ನು ಗೌರವಿಸೋಣ, ಅದನ್ನು ಅಧ್ಯಯನ ಮಾಡೋಣ, ದೇಶಪ್ರೇಮಿಗಳಾಗೋಣ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬಾಬಾಸಾಹೇಬ್ ಅಂಬೇಡ್ಕರ್ ರ ವಿಜ್ಞಾನದ ಜ್ಞಾನ -ರಘೋತ್ತಮ ಹೊಬ
ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಸಮಾನತೆಗಾಗಿ ಹೋರಾಡಿದ ಮಹಾನ್ ಚೇತನ
ಬಾಬಾಸಾಹೇಬ್ ಅಂಬೇಡ್ಕರ್ ರ ಕೊನೆಯ ಸಂದೇಶ
ಮಹಿಳೆಯರ ಹಕ್ಕುಗಳ ರಕ್ಷಕ: ಬಾಬಾಸಾಹೇಬ್ ಡಾ.ಅಂಬೇಡ್ಕರ್
ಭೀಮ ಕೋರೆಗಾಂವ್ ಕದನ- ಜಾತಿ ಸಂಕೋಲೆಯಿಂದ ಶಿಕ್ಷಣ ಬಿಡುಗಡೆಯಾದ ದಿನ
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸುಟ್ಟ ಮನುಸ್ಮೃತಿ ಈಗ ಎಲ್ಲಿದೆ?