“ಸಂವಿಧಾನ ಶಿಲ್ಪಿ” ಬಿರುದನ್ನೇ ಕೈಬಿಟ್ಟ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ | ಅಂಬೇಡ್ಕರ್ ಗೆ ಮತ್ತೊಮ್ಮೆ ಅವಮಾನ
ಬೆಂಗಳೂರು: ರಾಜ್ಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಒಂದು ವರ್ಗದ ವೈಭವೀಕರಣ ಮತ್ತು ಹಿಂದುಳಿದ ಸಮುದಾಯಗಳ ನಾಯಕರನ್ನು ಅವಮಾನಿಸಿರುವ ಕುಚೇಷ್ಠೆಯ ಪರಿಷ್ಕರಣಾ ಸಮಿತಿ ಅನ್ನೋದು ಮತ್ತೊಮ್ಮೆ ಸ್ಪಷ್ಟವಾಗಿದ್ದು, ರೋಹಿತ್ ಚಕ್ರತೀರ್ಥ ನೇತೃತ್ವದ ಸಮುದಾಯ ದ್ವೇಷಿ ತಂಡ “ಸಂವಿಧಾನ ಶಿಲ್ಪಿ” ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಿರುದನ್ನು ಪಠ್ಯಪುಸ್ತಕದಲ್ಲಿ ಉಲ್ಲೇಖಿಸದೇ ವಿಕೃತಿ ಮೆರೆದಿರುವುದು ಬಯಲಾಗಿದೆ.
ಹೌದು..! ಇದು ಯಾವುದೋ ಪ್ರಮಾದದಿಂದ ಆಗಿರುವ ವಿಚಾರವಲ್ಲ. ಸಂವಿಧಾನ ಶಿಲ್ಪಿಯ ವಿಚಾರದಲ್ಲಿ ಮೊದಲೇ ಅಸಮಾಧಾನ ಹೊಂದಿದ್ದ ರೋಹಿತ್ ಚಕ್ರತೀರ್ಥ ಉದ್ದೇಶ ಪೂರ್ವಕವಾಗಿ ನಡೆಸಿರುವ ಕೃತ್ಯವಾಗಿದೆ. 9ನೇ ತರಗತಿ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎನ್ನುವ ವಿಚಾರವನ್ನೇ ಮರೆಮಾಚುವ ಮೂಲಕ ಕಿಡಿಗೇಡಿತನ ಪ್ರದರ್ಶಿಸಲಾಗಿದೆ.
ದೇಶದ ಮಹಾನಿಯರಿಗೆ ಒಂದರ ಹಿಂದೊಂದರಂತೆ ಅವಮಾನ ಎಸಗಲಾಗಿದ್ದರೂ, ಸಿಎಂ ಬೊಮ್ಮಾಯಿ ಅವರು ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಆಂಟಿ ಮನೆಯ ಟ್ಯಾಂಕ್ ಕ್ಲೀನ್ ಮಾಡಲು ಹೋದ ಕಥೆ ಹೇಳುವ ಪೊಲಿ ಹುಡುಗನ ಕೈಗೆ ಪಠ್ಯಪುಸ್ತಕ ಪರಿಷ್ಕರಣೆಯ ಜವಾಬ್ದಾರಿ ನೀಡಿರುವ ರಾಜ್ಯ ಸರ್ಕಾರ, ಮುಂದಿನ ಪೀಳಿಗೆಯ ಮಕ್ಕಳಿಗೆ ಎಂತಹ ಪಠ್ಯ ನೀಡಿದೆ ಎನ್ನುವ ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.
ಅಂಬೇಡ್ಕರ್ ಅವರ ಪಠ್ಯವನ್ನು ಸರ್ಕಾರ ತಕ್ಷಣವೇ ಸರಿಪಡಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಭಾರೀ ಪ್ರತಿಭಟನೆಯನ್ನು ರಾಜ್ಯ ಸರ್ಕಾರ ಎದುರಿಸಬೇಕಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಾರಿಯ ಪಠ್ಯ ಪುಸ್ತಕ ರಾಜ್ಯಕ್ಕೆ ಅವಮಾನ ಮಾತ್ರವಲ್ಲ ಬಿಜೆಪಿ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಿದೆ, ಮಕ್ಕಳು ಕಲಿಯುವ ಪುಸ್ತಕದಲ್ಲಿಯೂ ಹಾಳು ರಾಜಕೀಯ ತುಂಬಲು ಯತ್ನಿಸಿರುವುದಕ್ಕೆ ರಾಜ್ಯ ಸರ್ಕಾರ, ಶಿಕ್ಷಣ ಇಲಾಖೆಗೆ ನಾಚಿಕೆಯಾಗುವುದಿಲ್ಲವೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪಂಜಾಬ್ ರಾಜಕೀಯದಲ್ಲಿ ಬಿಜೆಪಿ ಮಹತ್ತರ ಪಾತ್ರ: ಅಮಿತ್ ಶಾ ಹೇಳಿಕೆ
ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ನಡು ರಸ್ತೆಯಲ್ಲೇ ತಾಯಿಗೆ ಮಾರಣಾಂತಿಕ ಹಲ್ಲೆ!
ಪಿಎಸ್ ಐ ಅಭ್ಯರ್ಥಿ ಮೇಲೆ ಹೆಚ್ ಡಿಕೆ ಗನ್ ಮ್ಯಾನ್ ಹಲ್ಲೆ ಆರೋಪ!
ಸಾವಿನಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಬಸ್ ಚಾಲಕ
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜನೆ