“ನಟ ಸಂಚಾರಿ ವಿಜಯ್  ಮೃತಪಟ್ಟಿಲ್ಲ, ಚಿಕಿತ್ಸೆ ಮುಂದುವರಿದಿದೆ” - Mahanayaka
1:26 AM Thursday 12 - December 2024

“ನಟ ಸಂಚಾರಿ ವಿಜಯ್  ಮೃತಪಟ್ಟಿಲ್ಲ, ಚಿಕಿತ್ಸೆ ಮುಂದುವರಿದಿದೆ”

sanchari vijay
14/06/2021

ಬೆಂಗಳೂರು: ನಟ ಸಂಚಾರಿ ವಿಜಯ್ ಅವರ ಮೆದುಳು ಮಾತ್ರ ನಿಷ್ಕ್ರಿಯವಾಗಿದೆ. ಅವರು ಉಸಿರಾಡುತ್ತಿದ್ದಾರೆ.  ಅಧಿಕೃತವಾಗಿ ಸಾವು ನಾವು ಪ್ರಕಟಿಸಿಲ್ಲ, ಅವರಿಗೆ ನಾವು ಇನ್ನೂ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಡಾ.ಅರುಣ್ ನಾಯ್ಕ್ ಹೇಳಿದ್ದಾರೆ.

‘ಒಮ್ಮೆ ಮೆದುಳು ನಿಷ್ಕ್ರಿಯಗೊಂಡ ಬಳಿಕ 6-8 ಗಂಟೆಗಳ ಕಾಲ ಸುಧಾರಣೆಗಾಗಿ ನಿರೀಕ್ಷಿಸಲಾಗುತ್ತದೆ. ಲೈಫ್ ಸಪೋರ್ಟ್ ಇಲ್ಲದೆ ಉಸಿರಾಟವಿದ್ದರೆ, ಬ್ರೈನ್ ಡೆಡ್ ಆದರೂ ಕೋಮಾದಲ್ಲಿರಬಹುದು. ಆದರೆ, ವಿಜಯ್ ವೆಂಟಿಲೇಟರ್ ನಲ್ಲಿದ್ದು, ಬಿಪಿ, ಹಾರ್ಡ್ ಬೀಟ್ ಸಮಸ್ಥಿತಿಯಲ್ಲಿಲ್ಲ, ಬೆಳಗ್ಗೆ ಒಮ್ಮೆ ಕಾರ್ಡಿಯೋ ಅಟ್ಯಾಕ್ ಆಗಿದೆ. ವೆಂಟಿಲೇಟರ್ ತೆಗೆದರೆ ಅಲ್ಲಿಗೆ ಎಲ್ಲವೂ ಮುಗಿಯುತ್ತದೆ. ಈ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದೇವೆ ಎಂದು ಅವರು ತಿಳಿಸಿದರು.

ಮೆದುಳು, ತಲೆಗೆ ಪೆಟ್ಟು ಬಿದ್ದಾಗ ಅಪಘಾತವಾದ 1 ಗಂಟೆಯೊಳಗೆ ಆಪರೇಟ್ ಮಾಡಿದರೆ ಬದುಕಿಸುವ ಸಾಧ್ಯತೆ ಹೆಚ್ಚಿರುತ್ತದೆ. ವಿಜಯ್ ಅವರ ಕೇಸಿನಲ್ಲಿ 20ನಿಮಿಷಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು, 1 ಗಂಟೆಯೊಳಗೆ ಸರ್ಜರಿ ಪ್ರಕ್ರಿಯೆ ಶುರುಮಾಡಿ ಮೆದುಳಿನ ರಕ್ತಸ್ರಾವವನ್ನು ಸ್ವಚ್ಛಗೊಳಿಸಿದೆವು, ಮೇಜರ್ ಸರ್ಜರಿ ಮಾಡಲಾಗಿದೆ. ಆದರೆ, ಉಸಿರಾಟ ಇರುವ ತನಕ ಡೆತ್ ಎಂದು ಹೇಳಲು ಸಾಧ್ಯವಿಲ್ಲ, 1 ಲಿವರ್ 2 ಕಿಡ್ನಿ ದಾನಕ್ಕೆ ಕುಟುಂಬದವರು ಒಪ್ಪಿದ್ದಾರೆ. ಈ ಬಗ್ಗೆ ಸಂಪೂರ್ಣ ಸಮ್ಮತಿ ಸಿಕ್ಕ ಬಳಿಕವಷ್ಟೇ ಅಂಗಾಂಗ ದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಸರ್ಕಾರಕ್ಕೆ ಈ ಬಗ್ಗೆ ತಿಳಿಸಬೇಕಾಗುತ್ತದೆ ಎಂದು ಡಾಕ್ಟರ್ ಶೈಲೇಶ್ ತಿಳಿಸಿದ್ದಾರೆ.

ಅಪಘಾತ ನಡೆದ ಸಂದರ್ಭದಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು, ಈ ವೇಳೆ ಅವರ ಉಸಿರಾಟ ಸಹಜವಾಗಿತ್ತು ಎಂದು ಹೇಳಲಾಗಿದೆ. ನಟ ಸಂಚಾರಿ ವಿಜಯ್ ಇನ್ನೂ ಜೀವಂತವಾಗಿದ್ದಾರೆ. ಯಾವುದಾದರೊಂದು ಮೆಡಿಕಲ್ ಮಿರಾಕಲ್ ನಡೆದು ಹೋಗಲಿ ಎಂದು ಅವರ ಬಂಧುಗಳು ಆಶಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ