ತುಂಗಾ ನದಿ ತಟದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಮರಳು ದಂಧೆ! - Mahanayaka

ತುಂಗಾ ನದಿ ತಟದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಮರಳು ದಂಧೆ!

maralu
18/03/2025

ಚಿಕ್ಕಮಗಳೂರು:  ತುಂಗಾ ನದಿ ತಟದಲ್ಲಿ ಎಗ್ಗಿಲ್ಲದೆ ಅಕ್ರಮ ಮರಳು ದಂಧೆ ನಡೆಯುತ್ತಿದೆ. ನಿತ್ಯ ಲಾರಿ, ಟಿಪ್ಪರ್, ಟ್ರ್ಯಾಕ್ಟರ್ ನಲ್ಲಿ ಹತ್ತಾರು ಲೋಡ್ ಸಾಗಾಟ ಮಾಡಲಾಗುತ್ತಿದೆ.


Provided by

ರಾತ್ರಿ ವೇಳೆ ಮಾತ್ರ ದಂಧೆಕೋರರು ಕಾರ್ಯಾಚರಣೆಗಿಳಿಯುತ್ತಾರೆ.  ನದಿ ಬಳಿ ಹೋಗೋ ಮಾರ್ಗದಲ್ಲೆಲ್ಲಾ ಪೊಲೀಸರು ಟ್ರಂಚ್ ಹೊಡೆದಿದ್ದಾರೆ.  ಕೊಪ್ಪ ತಾಲೂಕಿನ ಹರಿಹರಪುರ ಸಮೀಪ  ಈ ಘಟನೆ ನಡೆದಿದೆ.

ಪಕ್ಷಾತೀತವಾಗಿ ಎಲ್ಲರೂ ಹೊಂದಾಣಿಕೆ ಮೇಲೆ ಮರಳು ದಂಧೆ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ. ಕದ್ದು ಮರಳು ಸಾಗಿಸಿ ಸರ್ಕಾರಿ ಜಾಗದಲ್ಲಿ ಶೇಖರಿಸಿ ಬಳಿಕ ಮಾರಾಟ ಮಾಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.


Provided by

ರಾತ್ರಿ ವೇಳೆ ಕಾಡಿನ ದಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ. ಯಾರಾದ್ರು ಬಂದರೆ ಮಾಹಿತಿ ನೀಡಲು ಸ್ಥಳೀಯರ ಯುವಕರ ಬಳಕೆ ಮಾಡಲಾಗುತ್ತಿದೆ.  ರಸ್ತೆಯುದ್ದಕ್ಕೂ ಅಲ್ಲಲ್ಲೇ ಇಬ್ಬರು ಹುಡುಗರನ್ನ ದಂಧೆಕೋರರು ನಿಲ್ಲಿಸುತ್ತಿದ್ದಾರ.

ಸ್ಥಳಕ್ಕೆ ಡಿವೈಎಸ್ಪಿ, ಪಿಎಸ್ಐ ನೇತೃತ್ವದಲ್ಲಿ ಭೇಟಿ, ಪರಿಶೀಲನೆ ನಡೆಸಲಾಗಿದ್ದು, ನದಿ ಬಳಿ ಹೋಗೋ ದಾರಿಗೆಲ್ಲಾ ಪೊಲೀಸರು ಟ್ರಂಚ್ ನಿರ್ಮಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ