"ವಿಠ್ಠಲಶ್ರೀ" ಪ್ರಶಸ್ತಿಗೆ ಸಂಧ್ಯಾ ಉರಣ್‌’ಕರ್ ಆಯ್ಕೆ - Mahanayaka

“ವಿಠ್ಠಲಶ್ರೀ” ಪ್ರಶಸ್ತಿಗೆ ಸಂಧ್ಯಾ ಉರಣ್‌’ಕರ್ ಆಯ್ಕೆ

sandhya
16/03/2023

ಬೆಂಗಳೂರು/ಶಿವಮೊಗ್ಗ: ರಾಜ್ಯ ನಾಮದೇವ ಸಿಂಪಿ ಮತ್ತು ಬಾಹುಸಾರ ಸಮಾಜ ವತಿಯಿಂದ ನೀಡಲಾಗುವ ಪ್ರಶಸ್ತಿಗೆ “ಸಂಧ್ಯಾ ಉರಣ್‌ಕರ್ (ಸಂಧ್ಯಾ ಸೊರಬ) ಇವರನ್ನು ಆಯ್ಕೆ ಮಾಡಲಾಗಿದೆ.

ಮಾಧ್ಯಮ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ” ವಿಠ್ಠಲಶ್ರೀ”ಪ್ರಶಸ್ತಿಗೆ ಸಂಧ್ಯಾ ಇವರನ್ನು ಆಯ್ಕೆ ಮಾಡಿರುವುದಾಗಿ ವಿಠ್ಠಲಶ್ರೀ ಆಯ್ಕೆ ಸಮಿತಿ ಮಂಜುನಾಥ ರೇಳೆಕರ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಸೊರಬದ  ಸಂಧ್ಯಾ ಉರಣಕರ್‌ ಇವರ ಮಾಧ್ಯಮ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ಮೂಡಲಗಿ ವತಿಯಿಂದ ನಾಮದೇವ ಶಿಂಪಿ ಮತ್ತು ಬಾಹುಸಾರ ಕ್ಷತ್ರಿಯ ಸಾಧಕರಿಗೆ ನೀಡುವ ವಿಠ್ಠಲಶ್ರೀ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ.ಸಂಧ್ಯಾ ಉರಣ್‌ಕರ್ ಸೊರಬದ ಹಿರಿಯ ಪತ್ರಕರ್ತರಾದ ಲಕ್ಷ್ಮೀಕಾಂತ ಉರಣ್‌ಕರ್ ಸುಧಾ ದಂಪತಿಯ ಹಿರಿಯ‌ ಪುತ್ರಿಯಾಗಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ