ಸ್ಯಾಂಡ್ ವಿಚ್ ನಲ್ಲಿ ಮೇಯನೇಸ್ ಜಾಸ್ತಿಯಾಯ್ತೆಂದು ಮಹಿಳೆಯ ಬರ್ಬರ ಹತ್ಯೆ! - Mahanayaka
3:05 PM Thursday 12 - December 2024

ಸ್ಯಾಂಡ್ ವಿಚ್ ನಲ್ಲಿ ಮೇಯನೇಸ್ ಜಾಸ್ತಿಯಾಯ್ತೆಂದು ಮಹಿಳೆಯ ಬರ್ಬರ ಹತ್ಯೆ!

sandwhich
30/06/2022

ಸ್ಯಾಂಡ್‌ ವಿಚ್ ನಲ್ಲಿ ಮೇಯನೇಸ್ ನ  ಪ್ರಮಾಣವು ಜಾಸ್ತಿಯಾಗಿದೆ ಎಂದು ಕಿರಿಕ್ ಮಾಡಿದ ಯುವಕನೋರ್ವ ರೆಸ್ಟೋರೆಂಟ್ ನ ಮಹಿಳಾ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಜಾರ್ಜಿಯಾದ ಸಬ್‌ ವೇ ರೆಸ್ಟೋರೆಂಟ್‌ ನಲ್ಲಿ ನಡೆದಿದೆ.

ರೆಸ್ಟೊರೆಂಟ್‌  ಗೆ ಬಂದ ಗ್ರಾಹಕ ಸ್ಯಾಂಡ್‌ ವಿಚ್ ಆರ್ಡರ್ ಮಾಡಿದ್ದು, ತಾನು ಆರ್ಡರ್ ಮಾಡಿದ ಸ್ಯಾಂಡ್ ವಿಚ್ ನಲ್ಲಿ ಮೇಯನೇಸ್ ಅಧಿಕವಾಗಿದೆ ಎಂದು ರೊಚ್ಚಿಗೆದ್ದು, ಕೈಯಲ್ಲಿದ್ದ ಬಂದೂಕನ್ನು ಹೊರತೆಗೆದು ಇಬ್ಬರು ಉದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ.

ಆರೋಪಿಯು ಗುಂಡು ಹಾರಿಸಿದ ಪರಿಣಾಮ 26 ವರ್ಷದ ಬ್ರಿಟಾನಿ ಮೆಕೋನ್ ಮೃತಪಟ್ಟರೆ, ಮತ್ತೋರ್ವ ವ್ಯಕ್ತಿ 24 ವರ್ಷದ ಜಡಾ ಸ್ಟಾಥಮ್  ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಪಿಯು ಅಟ್ಲಾಂಟಾ ಮೂಲದ 36 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಈತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಂಗಳೂರಿನಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯವಸ್ತ! | ಶಾಲೆಗಳಿಗೆ ರಜೆ ಇದೆಯೇ?

ಗ್ರಾಹಕರ ವೇಷದಲ್ಲಿ ಬಂದು ಕತ್ತು ಕೊಯ್ದರು: ಬೆಚ್ಚಿಬೀಳಿಸಿದ ಟೈಲರ್ ಹತ್ಯೆಯ ವಿಡಿಯೋ

ಕೊಲೆಗಡುಕ ಮುಸಲ್ಮಾನರಿಗೆ ಶಿಕ್ಷೆ ನೀಡಲು ಕಾನೂನು ತಿದ್ದುಪಡಿ ಮಾಡಬೇಕು: ಮಾಜಿ ಸಚಿವ ಈಶ್ವರಪ್ಪ

ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕಿದ ಟೈಲರ್ ನ ಬರ್ಬರ ಹತ್ಯೆ!

 

ಇತ್ತೀಚಿನ ಸುದ್ದಿ