ಸ್ಯಾನಿಟೈಸರ್ ಕುಡಿಯುವ ಚಟ: ವ್ಯಾಪಾರಿಗಳಿಗೆ ತಲೆನೋವಾದ ಕೆಎಸ್ ಇಬಿ ನೌಕರ
ಇಡುಕ್ಕಿ: ಅಂಗಡಿ ಮುಂದೆ ಕೈ ಸ್ವಚ್ಛಗೊಳಿಸಲೆಂದು ಸ್ಯಾನಿಟೈಸರ್ ಇಟ್ಟರೆ, ಸಂಜೆಯಾಗೋವಷ್ಟರಲ್ಲಿ ಖಾಲಿ ಬಾಟಲಿ ಮಾತ್ರವೇ ಉಳಿಯುತ್ತಿತ್ತು. ಇದರಿಂದಾಗಿ ಇಡುಕ್ಕಿಯ ಚೆರುಥೋನಿ ಮೂಲದ ‘ಅಲಿಯಾರ್’ ವ್ಯಾಪಾರಿಗಳು ಕಂಗಾಲಾಗಿದ್ದರು. ಆದರೆ ಇದೀಗ ಅಸಲಿ ವಿಚಾರ ಏನು ಎನ್ನುವುದು ತಿಳಿಯುತ್ತಿದ್ದಂತೆಯೇ ವ್ಯಾಪಾರಿಗಳು ಬೆಚ್ಚಿಬಿದ್ದಿದ್ದಾರೆ.
ಹೌದು.. ಇಷ್ಟಕ್ಕೆಲ್ಲ ಕಾರಣ ಕೆಎಸ್ ಇಬಿ ನೌಕರ ಚೆರುಥೋನಿ ಎನ್ನುವುದು ಸಿಸಿ ಕ್ಯಾಮರಾ ದೃಶ್ಯಾವಳಿಗಳಿಂದ ತಿಳಿದು ಬಂದಿದೆ. ಈತ ದಿನನಿತ್ಯ ಅಂಗಡಿಗಳ ಮುಂದೆ ಇಡಲಾಗುತ್ತಿದ್ದ ಸ್ಯಾನಿಟೈಸರ್ ನ್ನು ಕುಡಿಯುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಯಾವಾಗ ನೋಡಿದರೂ ಮದ್ಯದ ಅಮಲಿನಲ್ಲಿರುವ ಈತ, ಊರೂರು ಅಲೆಯುತ್ತಿರುತ್ತಾನೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ಮದ್ಯ ಸೇವನೆ ಮಾಡುವ ಈತ ಮದ್ಯ ಸಿಗದೇ ಇರುವ ವೇಳೆ ಸ್ಯಾನಿಟೈಸರ್ ಸೇವನೆ ಮಾಡಲು ಆರಂಭಿಸಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಪೊಲೀಸರು ಹಾಗೂ ಕೆಎಸ್ ಇಬಿ ಮಧ್ಯಪ್ರವೇಶಿಸಿ, ವ್ಯಕ್ತಿಗೆ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಯೋಗ ದಿನಾಚರಣೆ ಹಿನ್ನೆಲೆ ಇಂದು ಶಾಲೆಗಳಿಗೆ ಅರ್ಧ ದಿನ ರಜೆ!
ಶಾಸಕ ರಾಮ್ ದಾಸ್ ಬೆನ್ನಿಗೆ ಗುದ್ದುವಷ್ಟು ಪ್ರೀತಿ ಮೋದಿಜಿಗೆ ಯಾಕೆ?: ರಾಮ್ ದಾಸ್ ಏನು ಹೇಳಿದ್ರು?
ಆಕ್ಸಿಜನ್ ಕೊಡೋಕೆ ಆಗದವರು ಯೋಗ ಮಾಡಲು ಬಂದಿದ್ದಾರೆ: ಸಿದ್ದರಾಮಯ್ಯ ಟೀಕೆ
ತಾಯಿ ಕೋತಿಯನ್ನು ಬೇಟೆಯಾಡಿದ ಚಿರತೆ: ತಾಯಿ ಎದೆ ಅಪ್ಪಿಕೊಂಡೇ ಇದ್ದ ಮರಿ ಕೋತಿ