ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದವ್ರ ಮೇಲೆ ಅಮಾನವೀಯ ವರ್ತನೆ: ಮಲಗಿದ್ದವರ ಮೇಲೆ ನೀರು ಎರಚಿದ ಸ್ವಚ್ಚತಾ ಕಾರ್ಮಿಕರು
ಉತ್ತರ ಭಾರತವನ್ನು ತೀವ್ರ ಚಳಿ ಆವರಿಸಿದ್ದು ಇದೇ ಸಂದರ್ಭದಲ್ಲಿ ಲಕ್ನೋದ ರೈಲ್ವೆ ಸ್ಟೇಷನ್ ನಲ್ಲಿ ಸ್ವಚ್ಛತಾ ಕಾರ್ಮಿಕರು ನಡೆದುಕೊಂಡ ರೀತಿಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರೈಲ್ವೆ ಫ್ಲ್ಯಾಟ್ ಫಾರ್ಮ್ ನಲ್ಲಿ ಮಲಗಿದ್ದ ಬಡವರ ಮೇಲೆ ಈ ಸಿಬ್ಬಂದಿಗಳು ನೀರು ಎರಚಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ವೈರಲ್ ಆದ ಕೂಡಲೇ ಡಿವಿಜನಲ್ ರೈಲ್ವೆ ಮ್ಯಾನೇಜರ್ ಸಚಿಂದ್ರ ಮೋಹನ್ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಜನರು ರೈಲ್ವೆ ಫ್ಲಾಟ್ ಫಾರ್ಮ್ ನಲ್ಲಿ ಮಲಗಿ ನಿದ್ರಿಸಬಾರದು. ಫ್ಲಾಟ್ ಫಾರ್ಮ್ ಇರುವುದು ಅದಕ್ಕಲ್ಲ. ರೈಲನ್ನು ನಿರೀಕ್ಷಿಸಿ ಕಾಯುವ ಪ್ರಯಾಣಿಕರಿಗಾಗಿಯೇ ಪ್ರತ್ಯೇಕ ವೈಟಿಂಗ್ ಕೋಣೆಗಳನ್ನು ಕಾಪಿಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಸ್ವಚ್ಛತಾ ಕರ್ಮಿಗಳ ವರ್ತನೆಯನ್ನು ತಿದ್ದಿಕೊಳ್ಳುವಂತೆ ನಾವು ಉಪದೇಶಿಸಿದ್ದೇವೆ. ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ಸ್ವಚ್ಛತೆ ಅಗತ್ಯವಾದರೂ ಸ್ವಚ್ಛತಾ ಕರ್ಮಿಗಳ ಈ ವರ್ತನೆಯನ್ನು ಒಪ್ಪಿಕೊಳ್ಳಲಾಗದು ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj