ಗರ್ಭಿಣಿ ಸಂಜನಾ ಅವರ ಸಂತಸದ ಸಂದರ್ಭದಲ್ಲಿಯೂ ನೋಯಿಸಿದ ಆ ನ್ಯೂಸ್ ಚಾನೆಲ್!
ನಟಿ ಸಂಜನಾ ಗಲ್ರಾನಿ ಅವರು ತಾಯಿಯಾಗಿದ್ದು, ಈ ಖುಷಿಯಲ್ಲಿ ಅವರಿದ್ದರೂ, ಅವರ ಖುಷಿಗೆ ಭಂಗ ತರುವಂತಹ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದ್ದು, ಸಂಜನಾ ಅವರ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಹರಿದಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಸುದ್ದಿವಾಹಿನಿಯೊಂದರ ವಿರುದ್ಧ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಜನಾ ಗರ್ಭಿಣಿಯಾಗಿರುವ ಸುದ್ದಿಯೊಂದಿಗೆ ಆಧಾರ ರಹಿತ ಸಾಲುಗಳನ್ನು ಸೇರಿಸಿ ವರದಿ ಮಾಡಲಾಗಿದ್ದು, ಸಂಜನಾ ಅವರ ಮೇಲೆ ದಾಖಲಾಗಿದ್ದ ಡ್ರಗ್ಸ್ ಕೇಸ್ ಬಗ್ಗೆಯೂ ಮತ್ತೆ ಪ್ರಸ್ತಾಪಿಸಲಾಗಿದ್ದು, ಇದರ ಜೊತೆಗೆ ಸಂಜನಾ ಅವರ ಡಿವೋರ್ಸ್ ಸುದ್ದಿಗಳು ಹರಿದಾಡಿದ್ದವು ಎಂಬ ಬಗ್ಗೆ ಅನಾವಶ್ಯಕವಾಗಿ ಪ್ರಸ್ತಾಪಿಸಿರುವುದಕ್ಕೆ ಸಂಜನಾ ತೀವ್ರ ನೋವು ವ್ಯಕ್ತಪಡಿಸಿದ್ದು, ಈ ಸುದ್ದಿ ಪ್ರಕಟಿಸಿದ ಸುದ್ದಿವಾಹಿನಿ ಕಚೇರಿಗೆ ಕರೆಮಾಡಿ, ನಿಮ್ಮಿಂದಾಗಿ ನಾನು ನೇಣು ಹಾಕಿಕೊಂಡು ಸಾಯಬೇಕೇ? ಎಂದು ಪ್ರಶ್ನಿಸಿ ತೀವ್ರ ಬೇಸರ ಹೊರ ಹಾಕಿರುವ ಆಡಿಯೋವೊಂದು ಇದೀಗ ಸುದ್ದಿಯಾಗಿದೆ.
ಚಾನೆಲೊಂದು ಸಂಜನಾ ಗಲ್ರಾನಿ ಅವರನ್ನು ಪದೇ ಪದೇ ಟಾರ್ಗೆಟ್ ಮಾಡುತ್ತಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿಂದೆ ಕ್ಯಾಬ್ ಸಿಬ್ಬಂದಿಯೊಂದಿಗೆ ಸಂಜನಾ ಕಿರಿಕ್ ಮಾಡಿದ್ದಾರೆ ಎನ್ನುವ ಸಣ್ಣ ಸುದ್ದಿಗೆ ಒಂದು ಡಿಬೆಟ್ ನ್ನೇ ನಡೆಸಿ ನಟಿಯನ್ನು ಅವಮಾನಿಸಲು ಯತ್ನಿಸಲಾಗಿತ್ತು. ಆದರೆ, ಈ ವೇಳೆ ಆ್ಯಂಕರ್ ನ್ನು ತರಾಟೆಗೆತ್ತಿಕೊಂಡಿದ್ದ ಸಂಜನಾ ಮರ್ಯಾದೆಯಿಂದ ಮಾತನಾಡುವ ಆ್ಯಂಕರ್ ಯಾರಾದರೂ ಇದ್ದರೆ ಮಾತನಾಡುತ್ತೇನೆ ಎಂದು ಹೇಳಿದ್ದರು. ಇದೀಗ ಸಂಜನಾ ಪ್ರೆಗ್ನೆಂಟ್ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅದೇ ಚಾನೆಲ್ ನ ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟಿಸಿರುವ ಸುದ್ದಿ, ಸಂಜನಾ ಅವರ ಸಂತಸವನ್ನು ಹಾಳು ಮಾಡಿದೆ ಎನ್ನುವ ನೋವನ್ನು ಸಂಜನಾ ತೋಡಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಶಿಕ್ಷಣಾಧಿಕಾರಿಗೆ ಮೊದಲು ಹೂವಿನ ಹಾರ ಹಾಕಿದರು, ಆ ನಂತರ ಚಪ್ಪಲಿ ಹಾರ ಹಾಕಿದರು
ಟಫ್ ರೂಲ್ಸ್ ಜಾರಿ ಸಾಧ್ಯತೆ: ಸುಳಿವು ನೀಡಿದ ಆರ್.ಅಶೋಕ್
ದೇವರ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥ: 12 ಮಕ್ಕಳು ಸಹಿತ 50 ಮಂದಿ ಅಸ್ವಸ್ಥ
“ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆಯ ಬದಲು 5 ಕೆ.ಜಿ ಎಲ್ ಪಿಜಿ ಗ್ಯಾಸ್”