ರಾಹುಲ್ ಗಾಂಧಿ ಬಗ್ಗೆ ಒಬಾಮಾಗೆ ಏನು ಗೊತ್ತಿದೆ? | ಒಬಾಮಾ ಹೇಳಿಕೆಗೆ ಸಂಜಯ್ ರಾವತ್ ತಿರುಗೇಟು - Mahanayaka

ರಾಹುಲ್ ಗಾಂಧಿ ಬಗ್ಗೆ ಒಬಾಮಾಗೆ ಏನು ಗೊತ್ತಿದೆ? | ಒಬಾಮಾ ಹೇಳಿಕೆಗೆ ಸಂಜಯ್ ರಾವತ್ ತಿರುಗೇಟು

14/11/2020

ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ಪುಸ್ತಕದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಬಗ್ಗೆ ಅಧ್ಯಾಪಕರನ್ನು ಮೆಚ್ಚಿಸಲು ತುದಿಗಾಲಲ್ಲಿ ನಿಂತಿರುವ ಕೋರ್ಸ್ ವರ್ಕ್ ಮುಗಿಸಿದ ವಿದ್ಯಾರ್ಥಿಯೆಂಬಂತೆ ಅಳುಕು, ಅಪಕ್ವತೆಯನ್ನು ಹೊಂದಿದವರು ಎಂದು ಉಲ್ಲೇಖಿಸಿರುವುದನ್ನು ಶಿವಸೇನಾ ವಕ್ತಾರ ಸಂಜಯ್ ರಾವತ್ ವಿರೋಧಿಸಿದ್ದಾರೆ.

ಒಬಾಮಾಗೆ ಭಾರತದ ಬಗ್ಗೆ ಎಷ್ಟು ತಿಳಿದಿದೆ? ವಿದೇಶಿ ರಾಜಕಾರಣಿಯೊಬ್ಬರು ಭಾರತದ ರಾಜಕೀಯ ನಾಯಕರ ಬಗ್ಗೆ ಅಂತಹ ಅಭಿಪ್ರಾಯಗಳನ್ನು ನೀಡುವುದು ತಪ್ಪು ಎಂದು ಹೇಳಿದ್ದಾರೆ.

ಒಬಾಮಾ ಅವರ ಹೇಳಿಕೆ ರಾಹುಲ್ ಗಾಂಧಿ ಅವರ ಸೈದ್ಧಾಂತಿಕ ವಿರೋಧಿಗಳಿಗೆ  ಆಹಾರ ಸಿಕ್ಕಂತಾಗಿದೆ. ಟ್ರಂಪ್ ಹುಚ್ಚ, ಒಬಾಮಾ ಹುಚ್ಚ ಎಂದು ಭಾರತೀಯರು ಯಾರಾದರೂ ಹೇಳಿದ್ದಾರೆಯೇ? ಆ ರೀತಿಯ ಹೇಳಿಕೆಗಳನ್ನು ನಾವೂ ಕೊಡಬಹುದಲ್ಲವೇ ? ಎಂದು ಅವರು ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ