ಸಣ್ಣ ನಟಿಯರಿಗೆ ಆಮಿಷ ಒಡ್ಡಿ ಕಾಮಪ್ರಚೋದಕ ವಿಡಿಯೋದಲ್ಲಿ ನಟಿಸುತ್ತಿದ್ದ ರಾಜ್ ಕುಂದ್ರಾ - Mahanayaka
9:22 AM Wednesday 5 - February 2025

ಸಣ್ಣ ನಟಿಯರಿಗೆ ಆಮಿಷ ಒಡ್ಡಿ ಕಾಮಪ್ರಚೋದಕ ವಿಡಿಯೋದಲ್ಲಿ ನಟಿಸುತ್ತಿದ್ದ ರಾಜ್ ಕುಂದ್ರಾ

raj kundra gehena vashishta
26/07/2021

ಮುಂಬೈ: ಉದ್ಯಮಿ ರಾಜ್ ಕುಂದ್ರಾ, ಸಣ್ಣ ನಟಿಯರಿಗೆ  ದೊಡ್ಡ ಅವಕಾಶಗಳನ್ನು ಕೊಡುವ ಆಮಿಷವೊಡ್ಡಿ ಅವರಿಂದ ಕಾಮಪ್ರಚೋದನೆಯ ವಿಡಿಯೋಗಳನ್ನು ಮಾಡಿಸುತ್ತಿದ್ದ ಎನ್ನುವ ವಿಚಾರ ಇದೀಗ ಬೆಳಕಿಗೆ ಬರುತ್ತಿದೆ. ಈ ಬಗ್ಗೆ ಈಗಾಗಲೇ ಇಬ್ಬರು ನಟಿಯರು ಕುಂದ್ರಾ ವಿರುದ್ಧ ನೇರ ಆರೋಪ ಮಾಡಿದ್ದಾರೆ.

ಇನ್ನೂ ರಾಜ್ ಕುಂದ್ರಾ ಆಮಿಷಕ್ಕೊಳಗಾಗಿ ಆತನ ಕಾಮಪ್ರಚೋದಕ ವಿಡಿಯೋಗಳಲ್ಲಿ ನಟಿಸಿದ್ದ ಮಾಡೆಲ್ ಗೆಹನಾ ವಶಿಷ್ಠ ಇಂದು ಕ್ರೈಂ ಬ್ರಾಂಚ್ ಪೊಲೀಸರ ವಿಚಾರಣೆಗೊಳಪಡಬೇಕಾಗಿತ್ತು. ಆದರೆ ಅವರು ಇಂದು ವಿಚಾರಣೆ ಹಾಜರಾಗಿಲ್ಲ. ಕುಂದ್ರಾ ಅವರ ಆ್ಯಪ್ ಗೆ ಬೇಕಾಗುವ ಮೂರು ಕಾರ್ಯಕ್ರಮಗಳಲ್ಲಿ  ಗೆಹನಾ ವಶಿಷ್ಠ ಕೆಲಸ ಮಾಡಿದ್ದರು. ರಾಜ್ ಕುಂದ್ರಾ ಜೊತೆಗೆ ಅವರು ಕೂಡ ಅರೆಸ್ಟ್ ಆಗಿದ್ದರು. ಆದರೆ ಆ ಬಳಿಕ ಅವರಿಗೆ ಜಾಮೀನು ದೊರಕಿತ್ತು.

ಇನ್ನೂ ಜಾಮೀನು ದೊರೆತ ಬಳಿಕ ಮಾತನಾಡಿದ್ದ ಗೆಹನಾ ವಶಿಷ್ಠ,  ರಾಜ್ ಕುಂದ್ರಾ ಅವರ ಅಪ್ಲಿಕೇಷನ್ ನಲ್ಲಿ ಕಾಮಪ್ರಚೋದಕ ವಿಡಿಯೋಗಳನ್ನಷ್ಟೇ ಮಾಡಲಾಗುತ್ತಿತ್ತು. ಅದು ಅಶ್ಲೀಲ ಚಿತ್ರಕ್ಕಿಂತ ಭಿನ್ನವಾದ ಚಿತ್ರಗಳು ಎಂದು ಹೇಳಿದ್ದರು.

ಇನ್ನೂ ಕುಂದ್ರಾನ ಚಿತ್ರಗಳ ನಿರ್ಮಾಣಗಳ ಬಗ್ಗೆ ಮಾಹಿತಿ ಪಡೆದುಕೊಳ್ಳು ವಶಿಷ್ಠ ಹಾಗೂ ಇನ್ನಿಬ್ಬರನ್ನು ಮುಂಬೈ ಕ್ರೈಂ ಬ್ರಾಂಚ್ ಪ್ರಾಪರ್ಟಿ ಸೆಲ್ ಗೆ ಭಾನುವಾರ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರು. ಆದರೆ ಯಾರು ಕೂಡ ಹಾಜರಾಗಿಲ್ಲ ಎಂದು ಹೇಳಲಾಗಿದೆ.

ಇನ್ನಷ್ಟು ಸುದ್ದಿಗಳು…

ಫೋಟೋ ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ಆಯುರ್ವೇದ ವೈದ್ಯೆ!

ತನ್ನ ಸಹಚರರ ಜೊತೆ ಸೇರಿ ಪತ್ನಿಯನ್ನೇ ಮುಗಿಸಿದ ಇನ್ಸ್ ಪೆಕ್ಟರ್!

ಬೆಳಗ್ಗೆ ಅಕ್ಕನ ಯೋಗದ ಭಂಗಿ, ಭಾವನಿಂದ ರಾತ್ರಿಯ ಭಂಗಿ | ಶಿಲ್ಪಾ ಶೆಟ್ಟಿಯ ತಂಗಿ ವಿರುದ್ಧ ಟ್ರೋಲ್

ತಾಯಿಯ ಕಣ್ಣೆದುರೇ ಬಾಲಕಿ ನೀರಿನಲ್ಲಿ ಕೊಚ್ಚಿ ಹೋದಳು!

ಇತ್ತೀಚಿನ ಸುದ್ದಿ