ಮನೆಯಲ್ಲಿ ಸಣ್ಣ ಫಿರಂಗಿ ಸ್ಫೋಟ: ಇಬ್ಬರ ಸಾವು, ಐವರಿಗೆ ಗಂಭೀರ ಗಾಯ
ಮಣಿಪುರ: ಮನೆಯೊಂದರಲ್ಲಿ ಸ್ಫೋಟವುಂಟಾಗಿ 6 ವರ್ಷದ ಬಾಲಕ ಸೇರಿ ಇಬ್ಬರು ಮೃತಪಟ್ಟು, ಐವರು ಗಂಭೀರ ಗಾಯಗೊಂಡಿರುವ ಘಟನೆ ಮಣಿಪುರದ ಚುರಾಚಾಂದ್ಪುರ ಜಿಲ್ಲೆಯ ಗಾಂಗ್ಪಿಮೌಲ್ ಎಂಬಲ್ಲಿ ನಡೆದಿದೆ.
ಸಣ್ಣ ಫಿರಂಗಿ ಸ್ಫೋಟದಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದ್ದು, ಮೃತರನ್ನು ಮಾಂಗ್ಮಿನ್ಲಾಲ್ ಮತ್ತು ಲ್ಯಾಂಗಿನ್ಸಾಂಗ್ ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ಗಂಭೀರ ಗಾಯಗೊಂಡಿರುವವರನ್ನು ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಭದ್ರತಾ ಪಡೆ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮಣಿಪುರದ ಎರಡು ಹಂತದ ವಿಧಾನಸಭೆ ಚುನಾವಣೆಗೆ ಇನ್ನೊಂದೇ ದಿನ ಬಾಕಿ ಇರುವಾಗ ಗಾಂಗ್ಪಿಮೌಲ್ ಎಂಬ ಹಳ್ಳಿಯ ಮನೆಯೊಂದರಲ್ಲಿ ಸ್ಫೋಟವುಂಟಾಗಿರುವು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಸ್ಫೋಟ ನಡೆದಿದ್ದು, ಮನೆಯಲ್ಲಿ ಫಿರಂಗಿ ಯಾಕಿತ್ತು? ಸ್ಫೋಟ ಉಂಟಾಗಿದ್ದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ತನಿಖೆ ನಡೆಯುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ದಲಿತರು ಮಾಡಿ ಕೊಟ್ಟ ಕಬ್ಬಿನ ಹಾಲು ಕುಡಿಯಬೇಕೆ..? ಎಂದು ಪ್ರಶ್ನಿಸಿ ಕಬ್ಬಿನ ಅಂಗಡಿ ಧ್ವಂಸ, ಹಲ್ಲೆ
ಬ್ಯಾಂಕ್ ಆಫ್ ಬರೋಡಾ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿಕೊಳ್ಳಿ ಈ ಲಾಭಗಳನ್ನು ಪಡೆಯಿರಿ
ಉಕ್ರೇನ್ ನ ಗ್ಯಾಸ್ ಪೈಪ್ ಲೈನ್ ಸ್ಫೋಟಿಸಿದ ರಷ್ಯಾ
ಧರ್ಮ-ದೇವರುಗಳನ್ನು ಮನುಷ್ಯರು ರಕ್ಷಿಸಬೇಕಾ ?
ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರಗೆ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ