ಸಂತನೆಂದರೆ….

26/01/2025
ಸಂತನೆಂದರೆ ಅವನು ಶಾಂತಿಯಿಂದಿರಬೇಕು
ಸಂತನೆಂದರೆ ಅವನು ಸವಿಮಾತನ್ನಾಡಬೇಕು
ಸಂತನೆಂದರೆ ಅವನು ಸಾವು ಗೆದ್ದಿರಬೇಕು
ಸಂತನೆಂದರೆ ಅವನು ಬೆಳಕಾಗಿರಬೇಕು
ಸಂತನೆಂದರೆ ಅವನು ಸರಿ ದಾರಿಲಿರಬೇಕು
ಸಂತನೆಂದರೆ ಅವನು ಮಮತೆಯಾಗಿರಬೇಕು
ಸಂತನೆಂದರೆ ಅವನು ಕರುಣಾಕರನಾಗಿರಬೇಕು
ಸಂತನೆಂದರೆ ಅವನು ಸರಳಾಕರನಾಗಿರಬೇಕು
ಸಂತನೆಂದರೆ ಅವನು ಗುರುವಾಗಿರಬೇಕು
ಸಂತನೆಂದರೆ ಅವನು ಬಯಲಾಗಿರಬೇಕು
ಸಂತನೆಂದರೆ ಅವನು ತಿಳಿಯಾಗಿರಬೇಕು
ಸಂತನೆಂದರೆ ಅವನು ಸರ್ವಜ್ಞನಾಗಿರಬೇಕು
- ಉದಂತ ಶಿವಕುಮಾರ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: